Popular Posts

Saturday, 22 December 2012

ಜೀವಂತ ವಯಲಿನ್ ಗಳು...!!!!

                                                                                                                                                
     

ಎಂದಿನಂತೆ ರಾತ್ರಿ ಊಟ ಮುಗಿಸಿದೆ, ಹಿಂದಿನ ದಿನ ರಾತ್ರಿ ಎರಡು ಗಂಟೆಯವರೆಗೆ ಸಿನೆಮಾ ನೋಡಿದ ಕಾರಣವೇನೋ ಗಂಟೆ ಒಂಬತ್ತು ಕೂಡ ಆಗಿರಲಿಲ್ಲ ಕಣ್ಣು ಎಳೆಯುತ್ತಿತ್ತು, ಹೊರಗಡೆ ಚಳಿ ಬೇರೆ, ರೂಮಿನ ಕಿಟಕಿ ಬಾಗಿಲುಗಳನ್ನು ಬಂದ್ ಮಾಡಿ ಫ್ಯಾನ್ ಸ್ವಿಚ್ ಹಾಕಿ ರೆಗ್ಯುಲೇಟರನ್ನು ಫುಲ್ಲು ತಿರುಗಿಸಿದೆ ಚಳಿ ಎಷ್ಟೇ ಇರಲಿ ನಂಗೆ ಫ್ಯಾನ್ ಮಾತ್ರ ಫುಲ್ಲ್ ಸ್ಪೀಡಲ್ಲಿ ಬೇಕು, ಕೊರೆಯುವ ಚಳಿಯಲ್ಲಿ ದಪ್ಪ ಹೊದಿಕೆಯ ಒಳಗೆ ಬೆಚ್ಚನೆ ಮುದುರಿ ಮಲಗುವುದೆಂದರೆ ಆಹಾ.. ವರ್ಣಿಸಲು ಪದಗಳು ಸಾಲದು. ಹಾಸಿಗೆ ಬಿಡಿಸಿ ಹೊದಿಕೆಯೊಳಗೆ ತೂರಿಕೊಂಡೆ, ಚಳಿಯೊಂದಿಗೆ ಬಿಸಿಯನ್ನು ಆನಂದಿಸತೊಡಗಿದೆ, ನಿದ್ರಾದೇವಿಯ ಆವಾಹನೆಯಾಗುತ್ತಿತ್ತು,..


      ಆನಂದಿಂದ ಆಲಿಸುತ್ತಿದ್ದೆ, ಕುನ್ನಕ್ಕುಡಿ ವೈದ್ಯನಾಥನ್ ರವರ ವಯೋಲಿನ್ ವಾದನ ಆಹಾ ಅದೇನು ರಾಗ, ಅದೇನು ಸ್ವರ., ಅಭೇರಿ ರಾಗದಲ್ಲಿ ನಗುಮೋಮು ನುಡಿಸುತ್ತಿದ್ದರು., ನನ್ನ ಇಷ್ಟದ ರಾಗ ವಾವ್, ನನ್ನ ಕೈ ಕಾಲುಗಳು ತಾಳಕ್ಕೆ ಜತೆಗೂಡುತ್ತಿದ್ದವು, ಕಣ್ಣು ಮುಚ್ಚಿ ಆನಂದಿಸುತ್ತಿದ್ದೆ, ಸ್ವಲ್ಪ ಹೊತ್ತಿನ ಮೇಲೆ ಬಹಳ ಇಂಪಿನಿಂದ ಕೂಡಿದ ವಯಲಿನ್ ನ ಸ್ವರ ತಾರಕಕ್ಕೇರಿತು, ಹೈ ಪ್ರೀಕ್ವೆನ್ಸಿಯ ಸ್ವರ ಅತ್ಯಂತ ಸಪೂರವಾಗಿ ಕಿವಿಗೆ ಕುಕ್ಕುತಿತ್ತು.. ತಡೆಯಾರದೆ ಕಣ್ಣು ತೆರೆದೆ., ಸುತ್ತಲೂ ಕರಾಳ ಕತ್ತಲೆ, ಕುನ್ನಕ್ಕುಡಿಯವರೆಲ್ಲಿ.? ನನ್ನ ಸುತ್ತಲೂ ಕುಳಿತಿದ್ದ ಅಗಾಧ ಜನಸಂಖ್ಯೆಯೆಲ್ಲಿ.? ಸುತ್ತಲೂ ನೋಡಿದೆ, ಬದಿಯಲ್ಲಿ ಮೊಬೈಲ್ ಕೂಗಿತು ಟಿಂ ಟಿಂ ಮೆಸೇಜ್ ಬಂದಿತ್ತು, ತೆಗೆದಾಗ ಮೊಬೈಲ್ನ ಬೆಳಕಲ್ಲಿ ಸುತ್ತಲೂ ನೋಡಿದೆ, ಹೌದು ಹಾಸಿಗೆ ಮೇಲಿದ್ದೇನೆ ಆದರೆ ಆ ಕಿವಿ ಕುಕ್ಕುವ ಸ್ವರ ಮತ್ತೆ ಕಿವಿಯ ಬಳಿಯಿಂದಲೇ ಕೇಳಿಸಿತು ಸಂಶಯವೇ ಇಲ್ಲ ಸೊಳ್ಳೆ..! ಸಿಟ್ಟು ಬಂದು ಬೀಸಿ ಹೊಡೆದೆ ಅಮ್ಮಾ.. ನನ್ನ ಕೆನ್ನೆಗೆ ನಾನೇ ಬಡಿದುಕೊಂಡೆ, ಸೊಳ್ಳೆ ಎಸ್ಕೇಪ್ ಆಗಿತ್ತು, ನಿದ್ದೆ ಎಲ್ಲಾ ಬಿಟ್ಟಿತ್ತು.
ಈ ಫ್ಹ್ಯಾನ್ ನ ಗಾಳಿಗೆ ಸೊಳ್ಳೆ ಹೇಗೆ ಬಂತು..? ಮೇಲೆ ನೋಡಿದರೆ ಫ್ಯಾನ್ ತಿರುಗುತ್ತಿಲ್ಲ ಥತ್ತೇರಿ ಕರೆಂಟ್ ಹೋಗಿದೆ, ಅಂದರೆ ಇಷ್ಟೊತ್ತು ಕೇಳಿಸಿದ ಕನಸಿನ ವಯಲಿನ್ ಈ ಸೊಳ್ಳೆಯೇ.. ಛೆ ಛೆ. ಎಂಬ ಬೇಜಾರಾಯಿತು
ದಪ್ಪ ಹೊದಿಕೆಯಾದಕಾರಣ ಮೈಯೆಲ್ಲಾ ಬೆವರಿತ್ತು., ಹೊದಿಕೆಯನ್ನು ಎಸೆದು ಹೋಗಿ ಕಿಟಕಿಯನ್ನು ತೆರೆದೆ, ಹೊರಗಿನಿಂದ ತಂಪಾದ ಗಾಳಿ ಬೀಸುತ್ತಿತ್ತು ಮನಸ್ಸಿಗೆ ಹಿತವೆನಿಸಿ ಪುನಹ ಹಾಸಿಗೆಯಲ್ಲಿ ಬಿದ್ದುಕೊಂಡೆ, ಸ್ವಲ್ಪ ಹೊತ್ತು ಮೈಯೆಲ್ಲ ಬೆವರಿದ್ದರಿಂದ ಕೂಡಲೇ ನಿದ್ದೆ ಬರಲಿಲ್ಲ, ಇನ್ನೇನು ನಿದ್ದೆ ಬಂತು ಅನ್ನುವಷ್ಟರಲ್ಲಿ ಎರಡೂ ಕಿವಿಗಳ ಬಳಿಯಲ್ಲಿ ಎರಡೆರಡು ವಯಲಿನ್ ಗಳು., ಕೈಗಳನ್ನು ಬೀಸಿದೆ ಸ್ವಲ್ಪ ದೂರ ಹೋದ ಸೊಳ್ಲೆಗಳು ಮತ್ತೆ ಹಾಜರ್, ಹೊದಿಕೆ ಹೊದ್ದು ಮಲಗಿದರೆ ವಿಪರೀತ ಸೆಖೆ, ಹೊದೆಕೆ ತೆಗೆದು ಮಲಗಿದರೆ ಕಚ್ಚುವ ವಯೋಲಿನ್ ಗಳ ಕಾಟ "ಯಪ್ಪಾ ಭಗವಂತಾ..." ಈಗ ಸಿನೆಮಾದ ಸುದೀಪ್ ನ ನೆನಪಾಯಿತು., ಸೊಳ್ಳೆಯನ್ನು ಗುರಿಯಿಟ್ಟು ಹೊಡೆಯುವ ಅಂದರೆ ಕತ್ತಲೆ., ಅಸಹಾಯಕನಾಗಿದ್ದೆ. ಸೊಳ್ಳೆಗಳ ಮೇಲೆ ಸಿಟ್ಟು ಉಕ್ಕುತ್ತಿತ್ತು, ಸೊಳ್ಳೆಗಳನ್ನು ಕೊಲ್ಲಲೇಬೇಕು ಕರೆಂಟ್ ಬರಲಿ ಮಾಡುತ್ತೇನೆ ಅಂದಕೊಂಡು ಫ್ಹ್ಯಾನ್ ಸ್ವಿಚ್ ಆಫ್ ಮಾಡಿ ಮತ್ತೆ ಬೆವರಿದರೂ ತೊಂದರೆಯಿಲ್ಲ ಅಂದುಕೊಂಡು ಕಿಟಕಿ ಬಾಗಿಲುಗಳನ್ನು ಬಂದು ಮಾಡಿದೆ ಸೊಳ್ಳೆಗಳು ತಪ್ಪಿಸಿಕೊಳ್ಳದಂತೆ, ದೇವರ ದಯೆ ನನ್ನ ಮೇಲಿತ್ತು ಕರೆಂಟ್ ಬಂತು.,ಸಡನ್ ಎದ್ದು ಲೈಟ್ ಆನ್ ಮಾಡಿದೆ., ಹಾರುತ್ತಿದ್ದ
ಸಂಗೀತ ವೋಕಲ್ ಗಳು ನನ್ನನ್ನ ನೋಡಿ ಕುಚೋದ್ಯ ಮಾಡಿದಂತಾಯಿದು., ನನ್ನ ಹಳೇ ಲಾಂಗ ಬುಕ್ ಅನ್ನು ತೆಗೆದು ಪಟ ಪಟ ಬೀಸಿದೆ ಎರಡು ಸೊಳ್ಳೆ ಸತ್ತು ಬಿತ್ತು, ಇನ್ನೆರಡು ಪಲಾಯನ ಮಾಡುವ ಹಾಗೆ ಅನಿಸಿತು. ರೂಮೆಲ್ಲಾ ಅಟ್ಟಿಸಿಕೊಂಡು ಬಡಿದೆ, ಹಲವು ಪೆಟ್ಟು ವೇಸ್ಟ್ ಆಯ್ತು, ಅಪ್ಪ ಅಮ್ಮ ರೂಮಿಂದ ಓಡಿಕೊಂಡು ಬಂದರು, "ಏನಾಯ್ತು ಮಾರಯಾ ಕಳ್ಲ ಗಿಳ್ಲ ಬಂದಿದಾನಾ.??" " ಏನಿಲ್ಲಾ ನಂಗೆ ಸ್ವಲ್ಪ ಲೆಕ್ಕ ಚುಕ್ತಾ ಮಾಡಲಿಕ್ಕುಂಟು ನೀವು ಹೋಗಿ ಮಲಗಿ."
" ಅಲ್ಲ ಮಾರಾಯ ನಿನ್ನ ಲೆಕ್ಕ ಚುಕ್ತದಿಂದ ನಮ್ಗೆ ನಿದ್ದೆ ಬರುದಿಲ್ಲಾ ನಾಳೆ ಬೆಳಿಗ್ಗೆ ಮಾಡು"
ನೀವು ಹೋಗಿ ಮಲಗಿ" ಅಂದೆ ಏರು ಸ್ವರದಿಂದ ಇನ್ನೆರಡು ಪೆಟ್ಟು ಹಾಕುತ್ತಾ.

ಅಬ್ಬ ಇನ್ನೊಂದು ಸೊಳ್ಳೆ ಬಿತ್ತು, ಉತ್ಸಾಹದಿಂದ ಮತ್ತೂ ಜೋರು ಬೀಸಿದೆ., ಕೊನೆಯದು ಸ್ವಲ್ಪ ಆಟ ಆಡಿಸಿ ಪುಸ್ತಕದೆಡೆಗೆ ಸಿಕ್ಕು ಸತ್ತು ಹೋಯಿತು..
ಸೇಡು ತೀರಿಸಿದ ಖುಷಿ ಮನಸ್ಸಿನಲ್ಲಿ ಕುಣಿಯುತ್ತಿತ್ತು, ಮೈಯಲ್ಲಿ ಬೆವರು ಹನಿಯುತ್ತಿತ್ತು ಹೋಗಿ ಫ್ಯಾನ್ ಆನ್ ಮಾಡಿದೆ  ಜೋರಾಗಿ ಬೀಸುತ್ತಿದ್ದ ಗಾಳಿ ಮೈಗೆ ಹಾಯ್ ಎನಿಸಿತು., ಸತ್ತ ಸೊಳ್ಳೆಗಳೆಡೆಗೆ ನೋಡಿದೆ
ಒಂದು ಸೊಳ್ಳೆಗೆ ಸ್ವಲ್ಪ ಜೀವವಿತ್ತು ಅದರ ಕಾಲುಗಳು ಸ್ವಲ್ಪ ಅಲ್ಲಾಡುತ್ತಿತ್ತು, ದಿಟ್ಟಿಸಿ ನೋಡಿದೆ., ಹೌದು ಸ್ವಲ್ಪ ಜೀವವಿತ್ತು., ಅದರ ಕಥೆ ಮುಗಿಸಬೇಕು ಅನ್ನುವಷ್ಟರಲ್ಲಿ., " ನಾನು ಕೇವಲ ನನ್ನ ಹೊಟ್ಟೆ ತುಂಬಿಸಿಕೊಳ್ಳಲು ಬಂದೆ ನಾನು ರಕ್ತ ಕುಡಿದಿದ್ದರೆ ನಿನಗೇನೂ ನಷ್ಟವಾಗುತ್ತಿರಲಿಲ್ಲ , ಅಂದ ಹಾಗೆ ನನ್ನ ಆಹಾರವೇ ನಿನ್ನ ರಕ್ತ, ನಾನು ಕಚ್ಚಿದಲ್ಲಿ ಸ್ವಲ್ಪ ತುರಿಕೆಯಾಗುತ್ತಿತ್ತೇ ವಿನಹ ಬೇರೆ ಏನೂ ಆಗುತ್ತಿರಲಿಲ್ಲ ಆದರೆ ನೀನು ನನ್ನ ಜೀವವನ್ನೇ ತೆಗೆದೆ ಅಲ್ಲವೇ., ? ನನ್ನ ದೇಹ ಚಿಕ್ಕದಿರಬಹುದು ಆದರೆ ನನ್ನ ಜೀವಕ್ಕೆ ಬೆಲೆ ಇಲ್ಲವೇ..??" ಅಂದಂಗಾಯಿತು.., ಯಾಕೋ ಉತ್ಸಾಹವೆಲ್ಲಾ ಇಳಿಯಿತು., ಪುನಹ ನೋಡಿದೆ, ಅದು ಸತ್ತಿತ್ತು ಯಾಕೋ ಉತ್ಸಾಹವೆಲ್ಲಾ ಸೋರಿ ಹೋಗಿತ್ತು, ಕೊಲೆ ಮಾಡಿದ ಪಾಪ ಪ್ರಜ್ನೆ ಮನಸ್ಸೆನ್ನೆಲ್ಲಾ ಕಾಡುತ್ತಿತ್ತು... ಹಾಗೇ...................zzzzzzzzzzzzzzzzz

Friday, 21 December 2012

ಪ್ರಳಯವೇ ಒಮ್ಮೆ ಬಾ...



ನೀನೊಮ್ಮೆ ಬರಬಾರದೇಕೆ.?
ಕಾಯುತಿಹಳು ತಡೆಯಲಾರದೆ ಆಕೆ..
ರೋಗಗಳು ಬಹಳ, ರಾಗ ದ್ವೇಷಗಳೂ ಬಹಳ
ಭೋಗಳೇ ಸಕಲ, ಕರುಣೆ ಸತ್ಯಗಳೋ..
ಬಹಳ ವಿರಳ..
ನೀನೊಮ್ಮೆ ಬರಬಾರದೇಕೆ.?
ಕಾಯುತಿಹಳು ತಡೆಯಲಾರದೆ ಆಕೆ..

ಬಡವರ ಬೆನ್ನೆಲುಬಿನ ಮಂಚ,
ಕನಸಿಗೂ ಕೇಳುವರು ಲಂಚ.,
ತನ್ನ ಗೋಡೆಯ ಚಿತ್ರಕೆ..
ಬಡವನ ಮೀಸೆಯ ಕುಂಚ.,
ಆಕೆಯ ಸಂಕಟ ನೋಡೊಮ್ಮೆ ಕೊಂಚ.
ನೀನೊಮ್ಮೆ ಬರಬಾರದೇಕೆ.?
ಕಾಯುತಿಹಳು ತಡೆಯಲಾರದೆ ಆಕೆ.

ಕೊಳಕು ತುಂಬಿ ನಾರಿದೆ ದೇಹ.
ಎಷ್ಟು ಮಾರಿದರೂ
ಅನುಭವಿಸಿದರೂ ತೀರದಿವರ ದಾಹ
ಅವಳಾಗಿ ತಡೆದುಕೊಂಡಳು..
ನೋಡಲಾರೆನು ನಾನು.
ನಿನ್ನ ಪರಿಶುದ್ದ ಆಲಿಂಗನಕೆ
ಕಾಯುತಿರುವಳು ಆಕೆ..


Monday, 17 December 2012

ಕಣ್ಣುಗಳು....


                                       




ಕಣ್ಣುಗಳೆರಡು ಇನ್ನೆರಡು ಕಣ್ಣುಗಳನ್ನು ಕಣ್ಣುಸಂದಣಿಗಳಲ್ಲಿ
 ಕಣ್ಣ ಮಿಟುಕಿಸದೇ ಹುಡುಕಾಡುತ್ತಿದ್ದವು,
ಕೆಲ ಕ್ಷಣಗಳ ನಂತರ ಆ ಕೋಮಲ ಕಣ್ಣುಗಳು ಕಂಡವು,
 ಈ ಕಣ್ಣರೆಪ್ಪೆಗಳು ಖುಷಿಯಿಂದ ಕುಣಿದಾಡಿದವು,
 ಏರಿದ ಹುಬ್ಬುಗಳು ಇಳಿದವು,
 ಕಣ್ಣುಗಳು ಕಲೆತುಕೊಂಡವು,
ಮಾತನಾಡಿಕೊಂಡವು, ಜಗಳವಾಡಿದವು,
 ಛೇಡಿಸಿಕೊಂಡವು,
 ಕಣ್ಣು ಕಣ್ಣುಗಳ ಮಿಲನಗಳಿಗೆ ಸಮಯದ ಕಣ್ಣು, ಹದ್ದಿನ ಕಣ್ಣುಗಳ
 ಕಾಟವಾಗತೊಡಗಿತು,
 ಬೆರೆತಿದ್ದ ಕಣ್ಣುಗಳು ಬೇರೆಯಾದವು
 ಬೇರೆಯಾದ ಕಣ್ಣುಗಳು ಅತ್ತವು,
 ಕೆಂಪಾದವು,
 ಕಣ್ಣುಗಳಿಗೇನು..? ನಿಂತು ನಿಂತು ಸುಸ್ತಾದ
 ರೆಪ್ಪೆಗಳು ಮುಚ್ಚಿಕೊಂಡವು, ಕಚ್ಚಿಕೊಂಡವು
 ನಿದ್ದೆಗೆ ಜಾರುತ್ತಿದ್ದ ಕಣ್ಣುಗಳು ಮುಚ್ಚಿದ
 ರೆಪ್ಪಗಳಲ್ಲಿ ಆ ಕಣ್ಣುಗಳ ಸನಿಹವನ್ನು ಬಯಸುತ್ತಿತ್ತು
 ಆ ಕಣ್ಣುಗಳ ನೆನಪು ಚಿತ್ರಪಟವಾಗಿ
 ರೆಪ್ಪೆಗಳನ್ನೇ ಪರದೆಯಾಗಿಸಿಕೊಂಡು
 ಮೂಡಿದವು..,
 ಕಣ್ಣುಗಳನ್ನು ಆವರಿಸಿಕೊಂಡವು
ತುಂಬಿಕೊಂಡವು.............

Saturday, 24 November 2012


ಹೃದಯದ ಭಾಷೆ ಕಲಿಯುವ ಆಸೆ
ನಿನ್ನೊಡನಾಡಿ ಬೆರೆಯುವ ಆಸೆ.
ಎದೆಯಲಿ ಮಿಡಿತ.. ನಿನ್ನೆಡೆ ಸೆಳೆತ.
ನಿನ್ನಯ ಮಡಿಲಲಿ ಮರೆಯುವ ಆಸೆ..
ನೀನೇ ನನ್ನಯ ಜೀವವೂ ಭಾವವೂ..
ನಿನ್ನ ಜತೆಯಲೇ ಜೀವನಾ.., ಸ್ವಾದವೂ.. || ಹೃದಯದ||

ಸಾಗರದಾ ಅಲೆಯಲೀ ತೇಲುವಾ ಬಾ..
ಆ ಮೀನಿನಾ ಹೆಜ್ಜೆಯಾ ಹುಡುಕುವಾ...
ಆಗಸದಾ ಮೇರೆಯಾ ಮೀರುವಾ ಬಾ..
ತಾರೆಗಳ ಪೋಣಿಸೀ ನೀಡುವೇ...
ಹೊಳೆಯುವ ಮುತ್ತಿನ ಮಾಲಿಕೆಯೇನು..
ನಿನ್ನಯ ಅಂದಕೆ ಹೋಲಿಕೆಯೇನು..??
ಕಳೆದೆದೋದೆನು ನಿನ್ನಲೀ ನಿನ್ನಲೀ.. || ಹೃದಯದ||

ಮುಂಜಾನೆಯ ಮಂಜಲೀ ಕರಗುವಾ ಬಾ
ಸಂಜೆಯಲಿ ಅಂಜದೇ ಸೇರು ಬಾ...
ಇರುಳಿನಲಿ ಕನಸಿಗೇ ದಾರಿಯಾಗು ಬಾ.
ಕೆರಳದಲೇ ಕರಗಿಸೋ ಕನ್ಯೆಯಾಗು ಬಾ..
ಮುಳುಗಿದ ಹೊತ್ತಿನ ಸಮಯದಿ ನೀನು..
ಮುಳುಗಿಸು ಮುತ್ತಿನ ಹೊಳೆಯಲಿ ನನ್ನಾ..
ಕಳೆದೋಗುವೇ ನಿನ್ನಲೀ ನಿನ್ನಲೀ.. || ಹೃದಯದ||

Monday, 29 October 2012

ಬದಾಲಾಯ್ತು ಋತು..



ಅದೊಂದು ವಸಂತಕಾಲ, ಒಂದು ಸ್ಥಳದಲ್ಲೊಂದು ಮರ ಬೆಳೆದಿತ್ತು. ತುಂಬು ಹರೆಯದ ಮರ., ಹೂ ಬಿಡುತ್ತಿತ್ತಷ್ಟೆ.   ಒಂದು ಒಂಟಿ ಕೋತಿಗೆ ಆ ಮರ ಇಷ್ಟವಾಯಿತು. ಮರದ ಸುತ್ತಲೂ ಲಾಗ ತೆಗೆದು ಮರಕ್ಕೆ ಆತ್ಮೀಯವಾಯಿತು., ಮರದಲ್ಲಿ ಜಾಗ ಸಂಪಾದಿಸಿತು. ಮರಕ್ಕೆ ಅದೇನು ಖುಷಿಯಾಯಿತೋ ಗೊತ್ತಿಲ್ಲ. ಆದಷ್ಟು ಬೇಗ ಹಣ್ಣುಗಳನ್ನು ಕೊಟ್ಟಿತು, ಕೋತಿ ಮರ ಬಿಟ್ಟು ಎಲ್ಲಿಗೂ ಹೋಗಲಿಲ್ಲ. ಮರ ಹಣ್ಣು ಕೊಡುತ್ತಲೇ ಇತ್ತು., ಕೋತಿ ಆಸ್ವಾದಿಸುತ್ತಲೇ ಇತ್ತು.. ಕೊನೆಗೊಂದು ದಿನ ಬದಲಾಯಿತು ಋತು.. ಹಣ್ಣುಗಳು ಖಾಲಿಯಾದವು.. ಎಲೆಗಳು ಉದುರಲಾರಂಭಿಸಿದವು., ಕೋತಿಗೆ ಹಣ್ಣು ದೊರಕಲಿಲ್ಲ ಹತಾಶೆಯಿಂದ ಮರವನ್ನು ಕುಲುಕಿಸಿತು.., ಇದ್ದ ಎಲೆಗಳೂ ಉದುರಿತು.., ಸುತ್ತಲೂ ನೋಡಿದಾಗ ದೂರದಲ್ಲಿ ಹಚ್ಚಹಸಿರಾದ ಹೂ ಭರಿತ ಮರ ಕಂಡಿತು,, ನೆಗೆಯಿತು ಪಕ್ಕದ ಮರಕ್ಕೆ, ಮರದಿಂದ ಮರಕ್ಕೆ., ಸೇರು ಆ ಹಸಿರು ಮರವನ್ನು ಉದ್ವೇಗದಿಂದ.., ಸಂತೋಷದಿಂದ..
ಮೊದಲಿನ ಮರಕ್ಕೆ ಉಳಿದದ್ದು., ಉದುರಿದ ಎಲೆಗಳು., ಕೋತಿ ಜಗಿದು. ಉಗಿದ ಹಣ್ಣಿನ ಸಿಪ್ಪೆಗಳು., ಮಂಜಿನ ಹನಿಗೆ ಮೊಳಕೆಯೊಡೆದ ಬೀಜಗಳು.., ಆದರೂ ದುಖದಿಂದ ಮುಂದಿನ ಋತುವಿಗಾಗಿ. ಆಗಸದತ್ತ ಕೈಚಾಚಿ ಬೇಡುತ್ತಿತ್ತು.......

Wednesday, 25 July 2012

ಹೀಗೊಂದು ಕನಸು..!!!


ನಾನು ಅವತ್ತು ಕೂಡ ಎಂದಿನಂತೆ.. ಬೈಕಿನಲ್ಲಿ ಸುಳ್ಯಕ್ಕೆ ಹೋಗುತ್ತಾ ಇದ್ದೆ.., ಬೇಂಗಮಲೆ ಕಾಡಿನ ರಸ್ತೆ ಬದಿಯಲ್ಲಿ ಹಳದಿ ಬಣ್ಣದ ಎರಡು ಸರ್ಪಗಳು. ಆಟ ಆಡುತ್ತಿದ್ದವು (ಯಾವ ಆಟ ಅಂತ ಕೇಳ ಬೇಡಿ) ನಾನು ಬೈಕ್ ನಿಲ್ಲಿ ಸ್ವಲ್ಪ ಹೊತ್ತು ಬೆರಗಿನಿಂದ ಆ ಹಾವುಗಳ ಆಟವನ್ನೌ ನೋಡುತ್ತಾ ನಿಂತೆ.., ಕೂಡಲೇ ಯಾರೋ ಹೇಳಿದ್ದು ನೆನಪಾಯಿತು.. " ಈಗ ಇಡ್ತಲೆಗೆ ಮಾತ್ರ ಅಲ್ಲ ಮಾರಾಯ ಒಳ್ಳೆ ಹಳದಿ ಬಣ್ಣದ ಸರ್ಪಗಳಿಗೆ ಒಳ್ಳೆ ರೇಟು ಉಂಟು ಮಾರಾಯ ಎಲ್ಲಿಯಾದರೂ ಕಂಡರೆ ನಂಗೆ ಹೇಳು ಸುಳ್ಯದಲ್ಲಿ ನಂಗೆ ಒಬ್ಬ ಬ್ಯಾರಿ ಪರಿಚಯ ಇದ್ದಾನೆ.., ಅವ ರೇಟು ಫಿಕ್ಸ್ ಮಾಡ್ತಾನೆ.., ಒಂದು ಹಾವು ಸಿಕ್ಕಿದ್ರೆ., ಎರಡು ವರ್ಷದ ಜೀವನಕ್ಕೆ ಸಾಕು..," ಅಂತ ಹೇಳಿ ಅವನ ಸೆಲ್ಲ್ ನಂಬರ್ ಕೊಟ್ಟಿದ್ದ್ದು  ನಂಗೆ ಮನಸಿನಲ್ಲಿ ಹೊಸ ಉತ್ಸಾಹ ಮೂಡಿತು.., ತಡ ಮಾಡಲಿಲ್ಲ ಬೈಕಿನ ಸೀಟಿನ ಅಡ್ಯಲ್ಲಿ ಅಗತ್ಯಕ್ಕೆ ಅಂತ ಮಡಚಿ ಇಟ್ಟ ಪ್ಲಾಸ್ಟಿಕ್ ಗೋಣಿಯಿಂದ ಮಾಡಿದ ಕೈ ಚೀಲವನ್ನು ತೆಗೆದೆ., ಹಾವುಗಳನ್ನು ಕಂಡರೆ ಸ್ವಲ್ಪ ಭಯ ಪಡುತ್ತಿದ್ದೆ.., ಯಾಕೋ ಎನೋ ಅವತ್ತು ಸ್ವಲ್ಪವೂ ಭಯವಾಗಲಿಲ್ಲ., ಆಟದಲ್ಲಿ ಮಗ್ನವಾಗಿದ್ದ ಎರಡು ಹಾವುಗಳ ಕತ್ತಿಗೆ ನೇರವಾಗಿ ಕೈ ಹಾಕಿ ಕೈ ಚೀಲದೋಳಗೆ ತುಂಬಿಸಿ ಚೀಲದ ಕೈಗೆ ಗಟ್ಟಿಯಾಗಿ ಗಂಟು ಹಾಕಿ. ಬೈಕಿನ ಹಾಂಡಲ್ ಗೆ ನೇತು ಹಾಕಿ ಅಂದು ಆತ ಕೊಟ್ಟಿದ್ದ ನಂಬರ್ ಗೆ ಕರೆ ಮಾಡಿದೆ..,  ಆಕಡೆಯಿಂದ ಗಡುಸಾದು ಧ್ವನಿ.., " ಹಲೋ ಆರಿ.., ನಾನು ಹೇಳಿದೆ., " ಹಲೋ ಇದು ಕಿರಣ ಅಂತ ನೀವು ಮಮ್ಮದೆ ಅಲ್ಲವಾ..??" ಅವನು " ಹಾ ಎಂತ ಹೇಳಿ.. ನಾನು " ನಂಗೆ ಎರಡು ಹಳದಿ ಬಣ್ಣದ ಸರ್ಪಗಳು ಸಿಕ್ಕಿದೆ.., ನಿಮ್ಮ ರೇಟು ಎಷ್ಟು..?" ಅವನು " ಮಾಲು ನೋಡ್ಬೇಕು ಸಾಮಿ.., " ನಾನು" ಆಯ್ತು.. ಈಗ ಎಲ್ಲಿದ್ದೀರಿ...,? " ಅವನು " ಕಾಯರ್ತೋಡಿಯ ಗುಜುರಿ ಅಂಗಡಿಯಲ್ಲಿ ಇದ್ದೇನೆ ಅಲ್ಲಿಗೇ ತೆಕ್ಕೊಂಡು ಬನ್ನಿ." ನಾನು ಆಯ್ತು ಅಂತ ಹೇಳಿ ಕಾಲ್ ಕಟ್ ಮಾಡಿ ಮೊಬೈಲ್ ಅನ್ನು ಜೇಬಲ್ಲಿ ಇಟ್ಟು ಚೀಲವನ್ನು ಒಮ್ಮೆ ನೋಡಿ ಖಚಿತ ಪಡಿಸಿ ಬೈಕ್ ಸ್ತಾರ್ಟ್ ಮಾಡಿ ಶರವೇಗದಿಂದ (70km/hr maximum) ಸುಳ್ಯದ ಕಾಯರ್ತೋಡಿಯ ಗುಜುರಿ ಅಂಗಡಿಯತ್ತ ಓಡಿಸಿದೆ. 5 ನಿಮಿಷಗಳಲ್ಲಿ ಅವನ ಅಂಗಡಿಯ ಎದುರಿನಲ್ಲಿ ಇದ್ದೆ. ಅಂಗಡಿಯತ್ತ ನೋಡಿದಾಗ ಸುಮಾರು ರಟ್ಟುಗಳ ಅಟ್ಟಿ., ಹಳೆಯ ಗಾಜಿನ ಬಾಟಲಿಗಳು., ಕಬ್ಬಿಣದ ಹಳೆಯ ವಾಹನಗಳ ಬಿಡಿ ಬಾಗಗಳು ಇನ್ನೂ ಎನೋ ಏನೋ..,ದೇವಸ್ಥಾನದಲ್ಲಿ ನಡೆ ಇರುವಂತೆ  ಮದ್ಯದಲ್ಲಿ ಒಳಗೆ ಹೋಗಲು ದಾರಿ.., ., ರಸ್ತೆಗೆ ಕಾಣುವಂತೆ ಮೇಜು , ಕುರ್ಚಿ ಹಾಕಿ ಕುಳಿತುಕೊಂಡು ಅದೇನೋ ಲೆಕ್ಕಾಚಾರ ಬರೆಯುತ್ತಿದ್ದ., ನಾನು ಚೀಲವನ್ನು ಚೀಲದ ಕೈಯಿಂದ  ಹಿಡಿದು ಎತ್ತಿ ಅವನತ್ತ ತೋರಿಸಿ ಎರಡು ಉಂಟು ಎಂಬತೆ ಸನ್ನೆ ಮಾಡಿದೆ. ಯಾಕೆಂದರೆ ಕಾನೂನು ಬಾಹಿರ ವಿಚಾರ ಅಲ್ಲವೆ..? ಅವನೂ ಆಚೆ ಈಚೆ ನೋಡಿ ಅವನೂ ತನ್ನಿ ಎಂಬಂತೆ ಸನ್ನೆ ಮಾಡಿದ., ನಾನು ತಲೆಯಾಡಿಸಿ ಚೀಲದತ್ತ ನೋಡಿದಾಗ ಗಂಟು   ಸ್ವಲ್ಪ ಸಡಿಲಾದಂತಾಯಿತು ಹಾವುಗಳು ಬಹುಷ ಒದ್ದಾಡುತ್ತಿರಬೇಕು.., ಬುಸುಗುಟ್ಟಿದಂತೆ ಕೇಳಿತು.., ಬಹುಷಃ ಸಿಟ್ತು ಬಂದಿರಬೇಕು.., ನಾನು ತಲೆ ಕೆಡಿಸಿಕೊಳ್ಳದೆ ಚೀಲದ ಕೈಯನ್ನು ಹಿಡಿದು ಅಂಗಡಿಯತ್ತ ಹೆಜ್ಜೆ ಹಾಕಿದೆ; ಕೂಡಲೇ ಹಾವುಗಳು ಕೋರಸ್ ನಲ್ಲಿ ಬುಸುಗುಟ್ತಿದಂತೆ ಕೇಳಿತು ಕೆಳಗೆ ಚೀಲದ ಬಾಯನ್ನು ನೋಡಿದೆ.., ಎರಡು ಹಾವುಗಳೂ ತಲೆಯನ್ನು ಹೊರಗೆ ಹಾಕಿ ಕೆಂಗಣ್ನಿನಿಂದ ಕೆಕ್ಕರಿಸಿ ನನ್ನನ್ನೇ ನೋಡಿ ಬುಸುಗುಟ್ತುತ್ತಿದ್ದವು., ನಾನು ಆಲೋಚನೆ ಮಾಡುವಷ್ಟರಲ್ಲಿ ಜಂಟಿಯಾಗಿ ನನ್ನ ಮೇಳೆ ಧಾಳಿಯಾಯಿತು. ಹೆಡೆಯೆತ್ತಿ ನನ್ನ ಮುಂಗೈಗೆ ಎರಡೂ ಹಾವುಗಳ ಹಲ್ಲುಗಳು ಬಲವಾಗಿ ಇರಿದವು., ನಾನು ಜೋರಾಗಿ ಕಿರುಚಿದೆ.., ಮೈಯೆಲ್ಲ ಝುಂ ಅನಿಸಿತು.., ವಿಷವೆಲ್ಲ ಮೈಯೇರುವ ಅಧ್ಬುತ ಅನುಭವವಾಯಿತು.., ಡಬ್ಬಲ್ ಡೋಸ್ ಅಲ್ಲವೆ ಭಾರೀ ಬೇಗ ಏರುತ್ತಿತ್ತು.., ಮೈಯ ಸಹಸ್ರ ಸಹಸ್ರ ರೋಮಗಳೆಲ್ಲ ನಿಮಿರಲು ಆರಂಭ ವಾಯಿತು.., ಬ್ಯಾರಿ ಓಡಿ ಬಂದ ಎಂಥ ಮಾಡಿದ್ದು ಸಾಮಿ ಅನ್ನುತ್ತಾ ನನ್ನ ಬಳಿಗೆ ಬಂದ ನಾನು ಕಣ್ಣು ಕತ್ತಲೆ ಬಂದಂತಾಗಿ ಅವನ ಮೇಲೆ ಬಿದ್ದೆ.. ಬಾಯಲ್ಲಿ ನೊರೆ ಬಂದಂತಾ ಅನುಭವ., ಬ್ಯಾರಿ ಏಳಿ ಸಾಮಿ ಏಳಿ ಅನ್ನುತ್ತಾ ಇದ್ದ.., ಹಾಗೆಯೇ ಕೇಳುತ್ತಿತ್ತು.. ಮತ್ತೆ ಬೇರೆಯೇ ಸ್ವರ ಕೇಳಿದಂತಾಯಿತು.., ಹೆಂಗಸಿನ ಸ್ವರ "ಏಳು ಮಾರಯಾ ಏಳು ಏಂತಾಯಿತು ನಿಂಗೆ ಏಳು ಮಾರಾಯಾ.." ನಂಗೆ ನೋವಿನಲ್ಲಿಯೂ ಆಶ್ಚರ್ಯವಾಯಿತು.., ಅಮ್ಮನ ಸ್ವರ..!! ಮೈಯನ್ನು ಅಲುಗಾಡಿಸಲು ಕಷ್ಟವಾಗುತ್ತಿತ್ತು.., ಕಷ್ತದಿಂದ ಕಣ್ಣು ತೆರೆದೆ ಅಮ್ಮನ ಮುಖ ಕಾಣಿಸಿತು ನನ್ನನು ಜೋರಾಗಿ ಅಲುಗಾಡಿಸಿ ಕೇಳಿದರು "ಘಂಟೆ ಒಂಬತ್ತಾಯಿತು ಆಫೀಸಿಗೆ ಹೋಗುದಿಲ್ವಾ..?" ನಾನು ಬೆಚ್ಚಿ ಬಿದ್ದು ಎದ್ದು ಕುಳಿತು ಸುತ್ತಲೂ ನೋಡಿದೆ.., ಮಂಚದ ಮೇಲಿದ್ದೇನೆ ಗಡಿಯಾರದ ಮುಳ್ಲು ಗಂಟೆ ಒಂಬತ್ತಾಯಿತೆಂದು ತೋರಿಸುತ್ತಿತ್ತು.., ಕಣ್ಣು ಉಜ್ಜಿಕೊಂಡು ನೋಡಿದೆ.. ಹೌದು., ನಾನು ಇನ್ನೂ ಬದುಕಿದ್ದೇನೆ., ಮತ್ತೆ ಬಾಯಲ್ಲಿ ನೊರೆ ಬಂದದ್ದು ಹಾಗೆಯೇ ಉಂಟಲ್ಲಾ ಎಂದು ನೋಡಿದರೆ ಜೊಲ್ಲು.., ಮಗ್ಗಲು ಮಲಗಿದ ಕಾರಣ ಇರಬೇಕು.. ಭಗವಂತನಿಗೆ ಮನಸಲ್ಲಿಯೇ ಕೈ ಮುಗಿದು ಕನಸನ್ನು ನನಸು ಮಾಡಬೇಡಪ್ಪಾ ಎಂದು ಬೇಡಿ ಟವಲ್ ಹಿಡಿದುಕೊಂಡು ಬಾತ್ ರೂಮಿಗೆ ಓಡಿದೆ..

Thursday, 5 July 2012

ನಾ ಎನು ಮಾಡಲಿ??!!


ನಿನ್ನ.. ಹೃದಯವು ಕಲ್ಲಾಗಿರಬಹುದು. ಆದರೆ...
ನನ್ನ ಹೃದಯವು ಸುತ್ತಿಗೆಯಲ್ಲವಲ್ಲಾ....!!
ನಿನ್ನ ಮನಸು ಮುಳ್ಳಾಗಿರಬಹುದು.. ಆದರೆ..
ನನ್ನ ಮನಸು ಸೂಜಿಯಲ್ಲವಲ್ಲಾ...
ನಿನ್ನ ಮಾತು. ಇರಿಯುವ ಚೂರಿಯಾಗಿರಬಹುದು..
ನನ್ನ ಮಾತು ಅರೆಯುವ ಸಾಣೆಯಲ್ಲವಲ್ಲಾ...

Wednesday, 20 June 2012

ಪ್ರೀತಿಯಾಗಿದೇ...!!!



ಕೊಂಚ ದಿನಗಳ ಕೆಳಗೆ.. ಮಿಂಚ ಬಳ್ಳಿಯ ಕಂಡೆ...
ಕುಂಚದಿ ಬಿಡಿಸಿದ ಕಲೆಯೋ.. ಕಚ್ಚಾ.., ದೀಪದ ನೆಣೆಯೋ..
ಎಲ್ಲೋ ದೊರಕಿದ ಗಣಿಯೋ.., ನನ್ನ ಮುತ್ತಿನ ಮಣೀಯೋ..
ಕಣ್ಣಾ ಅಂಚಿನ ದನಿಯೋ.,  ನನ್ನ ಮುದ್ದಿನ ಗಿಣಿಯೋ..

ಒಲವೆಂದು.. ನಾ ಹಾಡಿದಾಗ..., ಬಲವಾಗಿ ನೀ ಬಂದೆಯಲ್ಲಾ...
ಮನವೊಮ್ಮೆ.. ಓಲಾಡಿದಾಗ.. ಬಲವನ್ನು ನೀ..ತಂದೆಯಲ್ಲಾ..                                                    
ಖುಷಿಯಾಗಿದೇ.. ನಾನು.. ತೇಲಾಡಿದೇ........

ಪ್ರೀತಿಯು ಹರಿದಾಡಿದಾಗ.. ನೀನು.. ನಲಿದಾಡಿದಾಗ..
ಕನಸು ಕೈಗೂಡಿದಾಗ.. ಹೃದಯ ಹಾರಾಡಿದಾಗ..
ನಿನ್ನ ಪ್ರೇಮದ ಋಣ ತುಂಬಿದಾಗಾ...
ಖುಷಿಯಾಗಿದೇ.. ನಾನು ತೇಲಾಡಿದೇ...

Saturday, 12 May 2012

ನೂತನ ಭಾರತ...!!



ಮೂಡೂತಿಹ ರವಿ ದೂರದ ಬೆಟ್ಟದೆಡೆಯಿಂದ
ಮುಗ್ಧ ನಗುವ ಚೆಲ್ಲಿ..
ಏರುತಿಹ ಮಂತ್ರಿ ಮಹೋದಯ ಕುರ್ಚಿಯನು
ತನ್ನ ಕಪಟ ನಗುವ ಚೆಲ್ಲಿ,
ಮುಗ್ಧ ಜನತೆಯ ರಕ್ತ ಚೆಲ್ಲಿ..!!

ಅಂದು ಗಾಂಧೀಜಿ ಬಯಸಿದ್ದರು
ಕಟ್ಟಲು ರಾಮ ರಾಜ್ಯ..
ಇಂದು ಮಂತ್ರಿ ಮಹೋದಯ ಕಟ್ಟುತ್ತಿದ್ದಾನೆ
ನೂತನ ಭಾರತವ..!!
ತುಂಬಿ ಕಪಟ ಭ್ರಷ್ಟ ತ್ಯಾಜ್ಯ..!!
ಎಂಥಹಾ ದೌರ್ಭಾಗ್ಯ...!!!
.

Saturday, 5 May 2012

ಸ್ವಾರ್ಥಿ!!



ಕೋಗಿಲೆಯು ಹಾಡಿತು ಕುಹೂ ಕುಹೂ ಸ್ವರ..
ಅದ ಕೇಳಿ ತಲೆದೂಗಿತು ಮಾವಿನ ಮರ..

ಎರಡೇ ದಿನದಿ ಅಳಿಯಿತು..  ಪ್ರಾಣಿ ಪಕ್ಷಿಗಳ ಈ ಸುಂದರ ಕಾಡು..
ಯಾಕೆಂದರೆ ಕೆಟ್ಟ ಪ್ರಾಣಿ ಮಾನವ ಕಟ್ಟುತ್ತಿದ್ದ ಕಾಂಕ್ರೀಟು ಗೂಡು..

ಬಂತು ದೊಡ್ದ ದೊಡ್ಡ ಕಾರ್ಖಾನೆ...,
ಕೆಲವು ಮರೆಯಾದವು...,
ಕೆಲವು ಸೆರೆಯಾದವು..,
ಕೆಲವುಕೊಲೆಯಾದವು.., ಕರಡಿ, ಕೋತಿ, ಸಿಂಹ ಆನೆ..!!

ಮರಗಳ ಕಡಿದು ಶುರುಮಾಡಿದ ಮಾರಲು..,
ಎಲ್ಲವೂ ತನಗೊಬ್ಬನಿಗೇ.. ಎಂಬಂತೆ ಮೀಸಲು..,

ಎಂಥಹಾ.. ವಿಪರ್ಯಾಸ..?
ಮುಗ್ಧ.. ಪ್ರಾಣಿಗಳ ಜೀವನದೊಂದಿಗೆ.. ಈತನ ಸರಸ..!!!??

ಈಗ ತನ್ನ ಸ್ವಾರ್ಥ ಲಾಲಸೆಗಳಿಗಾಗಿ ಈತನ ಹಾರಾಟ..
ಕ್ಷಮಿಸಿಯಾಳೇ.. ಭೂತಾಯಿ..
ಅನುಭವಿಸುತ್ತಾನೆ.. ಒಂದು ತುತ್ತಿಗೂ ಪರದಾಟ..!!!..

Friday, 4 May 2012

ಹೊಸ ತಂಗಿ



ಅಂದು ಎದುರಲ್ಲಿ ಸಿಕ್ಕಳು ಆ ಹುಡುಗಿ..
ನಾನಂದೆ ನೀ ಸುಂದರ ಬೆಡಗಿ..
ಸುಂದರೀ ನೀ ನನ್ನ..;
ಹೃದಯಕ್ಕೆ ಹಾಕಿದ್ದಿ ಕನ್ನ
ಅವಳಂದಳು,
ಅಣ್ಣ ಎಂದು ಭಾವಿಸಿದ್ದೆ ನಿನ್ನ..!!
ನಾನಂದೆ , ಮೂರ್ಖಿ..;
ನೀ ನನ್ನವಳಾದರೆ ಹೆಚ್ಚು ಸುಖಿ..
ಅವಳು ಮರು ಮಾತಾಡದೆ..;
ಕಟ್ಟಿದಳು ರಾಖಿ,,!!!.

Tuesday, 1 May 2012

ಹೀಗೊಂದು ವೇದನೆ..!!

ಅಂದು ಅವಳಂದಳು.
ಓ ನಲ್ಲ.. ನೀನೇ ನನಗೆಲ್ಲ..;
ಹೃದಯ ತುಂಬಿ ಬಂತು..,
ಗೆಳೆಯನ ಮದುವೆಯಲ್ಲಿ..;
ಷಡ್ರಸ ಭೋಜನವ ಉಂಡಾಗ.. ಆಗುವಂತೆ..!!

ಮಗದೊಮ್ಮೆ ಬಿಗಿದಪ್ಪಿ...
ತುಟಿಗೊಂದು ಮುತ್ತನೊತ್ತಿ ಅಂದಳು..;
ನೀ ನನ್ನ ಮುದ್ದು........,
ಪ್ರೀತಿ ಹರಿದು ಬಂತು.;
ಗೆಳೆಯನ ಅಣ್ಣ ಬಲವಂತದಿಂದ.. ಬಡಿಸಿದ..
ಪಾಯಸದಂತೆ....

ಇಂದು ಕರೆದರೂ ತಿರುಗಿ ನೋಡದೆ..
ಅಂದಳು.. ನೀನಲ್ಲ ನನ್ನ ನಲ್ಲ..
ನಿನ್ನ ಬಳಿ ಏನಿಲ್ಲ.., ನನಗಾಗಿದೆ ನಿಶ್ಚಿತ...
ನಾ ನಿನ್ನವಳಲ್ಲ ಖಚಿತ..
ಕಣ್ಣು ತುಂಬಿ ಬಂತು..,
ಊಟದ ಕೊನೆಯಲ್ಲಿ ಮಜ್ಜಿಗೆಯಲ್ಲಿನ
ಹಸಿಮೆಣಸ ತುಂಡನ್ನು ತಪ್ಪಿ ಜಗಿದಾಗ ಆಗುವಂತೆ..!!!!!!
.

Wednesday, 28 March 2012

ಕಾಯುವೆನು ನಾನು..!!!

ದಿನವಿಡೀ ಮಳೆಯ ಹನಿಯಲಿ ನೆಂದು..
ದಿನವಿಡೀ ರವಿಯ ಕಿರಣದಿ ಬೆಂದು..,
ದಿನವಿಡೀ.. ಹಸಿ ಹಸಿದು ನಿಂದರೂ...
ಬಳಲಲಿಲ್ಲ ನಾನು...

ನಿನ್ನ ಮೊಗದ ಆ ಚೆಲುವು...
ನಿನ್ನೆ ನೀ ತೋರಿದ ಒಲವು..
ನಿನ್ನ ಸುಂದರ ನಿಲುವು...
ಕಾಣದೆ ಸೋರುತ್ತಿದೆ ನನ್ನ ಬಲವು..

ಬಸವಳಿದು ಬೆಂಡಾಗಿಹೆನು ನಾನು...
ಓ ಪ್ರಿಯತಮೇ....
ಬೇಗ ಬಂದು ನನ್ನ ಕಾಣು.. ಕಾಯುತ್ತಿರುವೆನು ನಾನು..
ಎಂದೆಂದೂ.. ಬದುಕಿರುವವರೆಗೆ....!!!!..

Saturday, 17 March 2012

ನಿದ್ದೆಯವರೆಗೆ...!!


ರವಿಯು ವಿರಮಿಸಲು.. ಹೊರಟನು...
ಶಶಿಯು ವಿಹರಿಸಲು ಹೊರಟನು.. .
ಕವಿಯು ವಿವರಿಸಲು ಹೊರಟನು..
ರವಿಯ.. ಇಳಿ ವಯಸ್ಸು..
ಆಹಾ.. ಅದೆಂಥಾ.. ಸೊಗಸು..
ತೊಟ್ಟಿಹನು.. ಕಿತ್ತಳೆ ಬಣ್ಣದ ದಿರಿಸು..
ಶಶಿಯೇನು.. ಕಮ್ಮಿ..
ತಿಳಿ ಹಾಲಿನ.. ಬಿಳುಪು
ಎಳೆ ಕಂದನ.. ಕಂಗಳ ಹೊಳಪು..
ರವಿಯು ಒರಗಿಯೇ ಬಿಟ್ಟ..
ಭೂ ತಾಯಿಯ ಮಡಿಲಲ್ಲಿ..
ಸಾಗರವ ಹೊದಿಕೆ ಮಾಡಿಬಿಟ್ಟು...
ಶಶಿಯೇರಿ.. ಆಗಸವ.. ತಾರೆಗಳ..
ಒಡನಾಡಿ... ಮೋಡದಾ.. ಉಯ್ಯಾಲೆಯಲಿ
ಹೊಸ ಕನಸ ಬಿತ್ತಿಹನು ಪ್ರೇಮಿಗಳ ಮನದಲ್ಲಿ..
ಹಸೆಗೊರಗಿ ಮಲಗುವಾ.. ಹೊತ್ತಲ್ಲಿ...
ದಣಿದ ಮೈ ಮನಗಳು.. ಕನಸ ಕಾಣುವ ಹೊತ್ತು..
ಹೊತ್ತು ತಂದಂತೆ ಕಡಲಾಳದಿಂದ... .
ಹೊಳೆಯುವ.. ಮುತ್ತು... 

ಅವಳಲೊಂದು ಪ್ರೇಮ ಬಿನ್ನಹ

ವಾರೆ ನೋಟದಿ ನೋಡುವೆ ಯಾತಕೆ
ನೋಟದಿ ನಿಜವೇನು..?

ಮಿರ ಮಿರ ಮಿಂಚುವ ನೋಟವು ನಾಟಿ
ಕಾಡುವ ಪರಿಯೇನು..? ಅಯ್ಯೋ..
ಕಾಡುವ ಪರಿಯೇನು..?

ಕನಸಲೂ ಹೀಗೆ ಆಗಿದೆ ಯಾಕೆ..
ಮಾಟವ ಮಾಡಿದೆಯಾ..?

ಮನಸಲಿ.. ಪೂರಾ ಗೋಜಲು ಯಾಕೆ.
ಕಾಟವ ನೀಡುವೆಯಾ..?

ಇರುಳಲಿ ಚಂದ್ರನು ನಿನ್ನನು ನೆನಪಿಸಿ
ನಿದ್ದೆಯ ಕೆಡಿಸುವನು..

ಹೃದಯವು ಕೂಡ ನಿನ್ನನು ಬಯಸಿ..
ಜಗಳವ ಮಾಡುತಿದೆ..

ಬಣ್ಣ ಬಣ್ಣದ ಕನಸುಗಳೆಲ್ಲ..
ಗೋಪುರ ಕಟ್ಟುತಿದೆ..

ನೀನೆ ನನ್ನ ಬಾಳಿನ ಒಡತಿ..
ಎನ್ನುತ ಹಾಡುತಿದೆ..

ನೀ ಜೊತೆಗಿದ್ದರೆ.. ಜಗವನೆ ಗೆಲ್ಲುವೆ..
ಎನ್ನುವ ನಂಬಿಕೆಯು..

ನೀ ಜೊತೆಗಿದ್ದು ಕೈಯನು ಹಿಡಿದು
ಜೀವನ ನಡೆಸುವೆಯಾ..?
ನನ್ನ ಬಾಳನು ಬೆಳಗುವೆಯಾ..??..

Friday, 16 March 2012

ಏನ ಮಾಡಲಿ...??

ಬೇಕೆಂದಾಗ ಮನದಲ್ಲಿ ಕವನ ಮೂಡೂವುದಿಲ್ಲ..;
ಯಾಕೆಂದರೆ.. ಸ್ಫೂರ್ತಿ ಬೇಕಲ್ಲ..?
ದೊರಕಿದ್ದೆಲ್ಲ.. ಸ್ಫೂರ್ತಿ ಆಗುವುದಿಲ್ಲ..;
ಯಾಕೆಂದರೆ ಮೈ ಮನಗಳು ತಣಿದು ಭಾವನೆಗಳು ಮೂಡಬೇಕಲ್ಲ..??!!
ಮೂಡಿದ ಭಾವನೆಗಳೆಲ್ಲಾ.. ಕವನವಾಗಿ.. ಹರಿಯುವುದಿಲ್ಲ..;
ಯಾಕೆಂದರೆ.. ನಮ್ಮ ಎಲ್ಲಾ ಭಾವನೆಗಳು.. ಉಚಿತವಾಗಿದೆ ಎಂದು..
ಎಲ್ಲರಿಗೂ ಅನಿಸಬೇಕಲ್ಲ...

ನಿನಗೆ...!

ನೀ ನಡುರಾತ್ರಿಯಲ್ಲಿ ನೆನಪಾಗಿ ಬರುವೆ..
ತಡರಾತ್ರಿಯಲ್ಲಿ ಕನಸಾಗಿ.. ಬರುವೆ..
ಮನದಾ.. ಮುಲೆಯಲಿ ನಸು ಕಚಗುಳಿಯಂತೆ ಕೊರೆವೆ.
ಹಾಲು ಸಕ್ಕರೆಯಂತೆ.. ಸಿಹಿಯಾಗಿ.. ಬೆರೆವೆ...
ಎದೆಯ ಆಳದಲ್ಲಿ.. ಒಲವಾಗಿ ಬರುವೆ..

ಇಶ್ಟೆಲ್ಲ ಕೊಡಲು ನೀನು..
ಏನ ಕೊಡಲಿ ನಿನಗೆ ನಾನು..
ನನ್ನನ್ನೇ.. ನಿನಗೆ.. ತೆರುವೆ..
ಮುಡಿಪಾಗಿ. ಇರುವೆ....

ಹಂಬಲ

ಅರಳಿದಾಗ ಅವಳ ಮೊಗದಲ್ಲಿ ನಗೆ ಕಮಲ ;
ಮನದಲ್ಲಿ ಮುಡಿತು ಒಂದು ಹಂಬಲ..!
ಕೇಳಿದೆನು.. ಅವಳ ಬಳಿ; ಮುತ್ತು ಕೊಡಲಾ..
ಒಂದೇ.. ಒಂದು ಸಲ...?
ಅವಳು ಉಲಿದಳು.. ಮೆಲ್ಲನೆ..
ಚಪ್ಪಲಿ ತೆಗೆದು.. ಬಾರಿಸಲಾ..
ಎರಡೇ.. ಎರಡು.. ಸಲ..??

ಮನಸಿನ ಗೊಡವೆ

ಓ ಮನಸೇ. ಹೀಗೇಕೆ ನೀ ಆಡುವೆ.?
ಅವಳು ಕಾಣದಿದ್ದರೆ ಯಾಕೆ ನೀ ಬಾಡುವೆ..?
ಇದ್ದರೆ ಸಾಲದೆ.. ಮುದ್ದಾಗಿ. ಎದೆಯ ಗೂಡಿನ ನಡುವೆ..?
ಮನಸೇ.. ನಿನ್ನ ಒಡಲಿಗೆ.. ಬೇರೆ ಬೇಕೇ..
ಇದಕ್ಕಿಂತ ಚೆನ್ನಾದ.. ಒಡವೆ..??.

ಕನಸು ಕರಗಿದಾಗ....!!

ಮುಂಜಾವಿನ ಹನಿಯಲ್ಲಿ ಕರಗಿತು ಕನಸು..;
ಕನಸು ಕರಗಿತಲ್ಲಾ ಎಂದು ಕ್ಶಣಕಾಲ ಮರುಗಿತು ಮನಸು..,
ಶುರುವಾಯಿತು ನೋಡಿ ಹಕ್ಕಿಗಳ ಚಿಲಿಪಿಲಿ, ಹಾರಟದ ಬಿರುಸು
ಆಗಸದಲ್ಲಿ ರವಿ ಮೇಳೈಸಿದನು ಆಹಾ.. ಎಂಥ ಸೊಗಸು..;
ಬಂತು ಮನದಲ್ಲಿ ಹೊಸ ಹುರುಪು,
ಎಂಥಾ ಕನಸಾದರೂ ಸರಿ ಮಾಡುವೆ.. ನನಸು..!!.