ನಾನು ಅವತ್ತು ಕೂಡ ಎಂದಿನಂತೆ.. ಬೈಕಿನಲ್ಲಿ ಸುಳ್ಯಕ್ಕೆ ಹೋಗುತ್ತಾ ಇದ್ದೆ.., ಬೇಂಗಮಲೆ ಕಾಡಿನ ರಸ್ತೆ ಬದಿಯಲ್ಲಿ ಹಳದಿ ಬಣ್ಣದ ಎರಡು ಸರ್ಪಗಳು. ಆಟ ಆಡುತ್ತಿದ್ದವು (ಯಾವ ಆಟ ಅಂತ ಕೇಳ ಬೇಡಿ) ನಾನು ಬೈಕ್ ನಿಲ್ಲಿ ಸ್ವಲ್ಪ ಹೊತ್ತು ಬೆರಗಿನಿಂದ ಆ ಹಾವುಗಳ ಆಟವನ್ನೌ ನೋಡುತ್ತಾ ನಿಂತೆ.., ಕೂಡಲೇ ಯಾರೋ ಹೇಳಿದ್ದು ನೆನಪಾಯಿತು.. " ಈಗ ಇಡ್ತಲೆಗೆ ಮಾತ್ರ ಅಲ್ಲ ಮಾರಾಯ ಒಳ್ಳೆ ಹಳದಿ ಬಣ್ಣದ ಸರ್ಪಗಳಿಗೆ ಒಳ್ಳೆ ರೇಟು ಉಂಟು ಮಾರಾಯ ಎಲ್ಲಿಯಾದರೂ ಕಂಡರೆ ನಂಗೆ ಹೇಳು ಸುಳ್ಯದಲ್ಲಿ ನಂಗೆ ಒಬ್ಬ ಬ್ಯಾರಿ ಪರಿಚಯ ಇದ್ದಾನೆ.., ಅವ ರೇಟು ಫಿಕ್ಸ್ ಮಾಡ್ತಾನೆ.., ಒಂದು ಹಾವು ಸಿಕ್ಕಿದ್ರೆ., ಎರಡು ವರ್ಷದ ಜೀವನಕ್ಕೆ ಸಾಕು..," ಅಂತ ಹೇಳಿ ಅವನ ಸೆಲ್ಲ್ ನಂಬರ್ ಕೊಟ್ಟಿದ್ದ್ದು ನಂಗೆ ಮನಸಿನಲ್ಲಿ ಹೊಸ ಉತ್ಸಾಹ ಮೂಡಿತು.., ತಡ ಮಾಡಲಿಲ್ಲ ಬೈಕಿನ ಸೀಟಿನ ಅಡ್ಯಲ್ಲಿ ಅಗತ್ಯಕ್ಕೆ ಅಂತ ಮಡಚಿ ಇಟ್ಟ ಪ್ಲಾಸ್ಟಿಕ್ ಗೋಣಿಯಿಂದ ಮಾಡಿದ ಕೈ ಚೀಲವನ್ನು ತೆಗೆದೆ., ಹಾವುಗಳನ್ನು ಕಂಡರೆ ಸ್ವಲ್ಪ ಭಯ ಪಡುತ್ತಿದ್ದೆ.., ಯಾಕೋ ಎನೋ ಅವತ್ತು ಸ್ವಲ್ಪವೂ ಭಯವಾಗಲಿಲ್ಲ., ಆಟದಲ್ಲಿ ಮಗ್ನವಾಗಿದ್ದ ಎರಡು ಹಾವುಗಳ ಕತ್ತಿಗೆ ನೇರವಾಗಿ ಕೈ ಹಾಕಿ ಕೈ ಚೀಲದೋಳಗೆ ತುಂಬಿಸಿ ಚೀಲದ ಕೈಗೆ ಗಟ್ಟಿಯಾಗಿ ಗಂಟು ಹಾಕಿ. ಬೈಕಿನ ಹಾಂಡಲ್ ಗೆ ನೇತು ಹಾಕಿ ಅಂದು ಆತ ಕೊಟ್ಟಿದ್ದ ನಂಬರ್ ಗೆ ಕರೆ ಮಾಡಿದೆ.., ಆಕಡೆಯಿಂದ ಗಡುಸಾದು ಧ್ವನಿ.., " ಹಲೋ ಆರಿ.., ನಾನು ಹೇಳಿದೆ., " ಹಲೋ ಇದು ಕಿರಣ ಅಂತ ನೀವು ಮಮ್ಮದೆ ಅಲ್ಲವಾ..??" ಅವನು " ಹಾ ಎಂತ ಹೇಳಿ.. ನಾನು " ನಂಗೆ ಎರಡು ಹಳದಿ ಬಣ್ಣದ ಸರ್ಪಗಳು ಸಿಕ್ಕಿದೆ.., ನಿಮ್ಮ ರೇಟು ಎಷ್ಟು..?" ಅವನು " ಮಾಲು ನೋಡ್ಬೇಕು ಸಾಮಿ.., " ನಾನು" ಆಯ್ತು.. ಈಗ ಎಲ್ಲಿದ್ದೀರಿ...,? " ಅವನು " ಕಾಯರ್ತೋಡಿಯ ಗುಜುರಿ ಅಂಗಡಿಯಲ್ಲಿ ಇದ್ದೇನೆ ಅಲ್ಲಿಗೇ ತೆಕ್ಕೊಂಡು ಬನ್ನಿ." ನಾನು ಆಯ್ತು ಅಂತ ಹೇಳಿ ಕಾಲ್ ಕಟ್ ಮಾಡಿ ಮೊಬೈಲ್ ಅನ್ನು ಜೇಬಲ್ಲಿ ಇಟ್ಟು ಚೀಲವನ್ನು ಒಮ್ಮೆ ನೋಡಿ ಖಚಿತ ಪಡಿಸಿ ಬೈಕ್ ಸ್ತಾರ್ಟ್ ಮಾಡಿ ಶರವೇಗದಿಂದ (70km/hr maximum) ಸುಳ್ಯದ ಕಾಯರ್ತೋಡಿಯ ಗುಜುರಿ ಅಂಗಡಿಯತ್ತ ಓಡಿಸಿದೆ. 5 ನಿಮಿಷಗಳಲ್ಲಿ ಅವನ ಅಂಗಡಿಯ ಎದುರಿನಲ್ಲಿ ಇದ್ದೆ. ಅಂಗಡಿಯತ್ತ ನೋಡಿದಾಗ ಸುಮಾರು ರಟ್ಟುಗಳ ಅಟ್ಟಿ., ಹಳೆಯ ಗಾಜಿನ ಬಾಟಲಿಗಳು., ಕಬ್ಬಿಣದ ಹಳೆಯ ವಾಹನಗಳ ಬಿಡಿ ಬಾಗಗಳು ಇನ್ನೂ ಎನೋ ಏನೋ..,ದೇವಸ್ಥಾನದಲ್ಲಿ ನಡೆ ಇರುವಂತೆ ಮದ್ಯದಲ್ಲಿ ಒಳಗೆ ಹೋಗಲು ದಾರಿ.., ., ರಸ್ತೆಗೆ ಕಾಣುವಂತೆ ಮೇಜು , ಕುರ್ಚಿ ಹಾಕಿ ಕುಳಿತುಕೊಂಡು ಅದೇನೋ ಲೆಕ್ಕಾಚಾರ ಬರೆಯುತ್ತಿದ್ದ., ನಾನು ಚೀಲವನ್ನು ಚೀಲದ ಕೈಯಿಂದ ಹಿಡಿದು ಎತ್ತಿ ಅವನತ್ತ ತೋರಿಸಿ ಎರಡು ಉಂಟು ಎಂಬತೆ ಸನ್ನೆ ಮಾಡಿದೆ. ಯಾಕೆಂದರೆ ಕಾನೂನು ಬಾಹಿರ ವಿಚಾರ ಅಲ್ಲವೆ..? ಅವನೂ ಆಚೆ ಈಚೆ ನೋಡಿ ಅವನೂ ತನ್ನಿ ಎಂಬಂತೆ ಸನ್ನೆ ಮಾಡಿದ., ನಾನು ತಲೆಯಾಡಿಸಿ ಚೀಲದತ್ತ ನೋಡಿದಾಗ ಗಂಟು ಸ್ವಲ್ಪ ಸಡಿಲಾದಂತಾಯಿತು ಹಾವುಗಳು ಬಹುಷ ಒದ್ದಾಡುತ್ತಿರಬೇಕು.., ಬುಸುಗುಟ್ಟಿದಂತೆ ಕೇಳಿತು.., ಬಹುಷಃ ಸಿಟ್ತು ಬಂದಿರಬೇಕು.., ನಾನು ತಲೆ ಕೆಡಿಸಿಕೊಳ್ಳದೆ ಚೀಲದ ಕೈಯನ್ನು ಹಿಡಿದು ಅಂಗಡಿಯತ್ತ ಹೆಜ್ಜೆ ಹಾಕಿದೆ; ಕೂಡಲೇ ಹಾವುಗಳು ಕೋರಸ್ ನಲ್ಲಿ ಬುಸುಗುಟ್ತಿದಂತೆ ಕೇಳಿತು ಕೆಳಗೆ ಚೀಲದ ಬಾಯನ್ನು ನೋಡಿದೆ.., ಎರಡು ಹಾವುಗಳೂ ತಲೆಯನ್ನು ಹೊರಗೆ ಹಾಕಿ ಕೆಂಗಣ್ನಿನಿಂದ ಕೆಕ್ಕರಿಸಿ ನನ್ನನ್ನೇ ನೋಡಿ ಬುಸುಗುಟ್ತುತ್ತಿದ್ದವು., ನಾನು ಆಲೋಚನೆ ಮಾಡುವಷ್ಟರಲ್ಲಿ ಜಂಟಿಯಾಗಿ ನನ್ನ ಮೇಳೆ ಧಾಳಿಯಾಯಿತು. ಹೆಡೆಯೆತ್ತಿ ನನ್ನ ಮುಂಗೈಗೆ ಎರಡೂ ಹಾವುಗಳ ಹಲ್ಲುಗಳು ಬಲವಾಗಿ ಇರಿದವು., ನಾನು ಜೋರಾಗಿ ಕಿರುಚಿದೆ.., ಮೈಯೆಲ್ಲ ಝುಂ ಅನಿಸಿತು.., ವಿಷವೆಲ್ಲ ಮೈಯೇರುವ ಅಧ್ಬುತ ಅನುಭವವಾಯಿತು.., ಡಬ್ಬಲ್ ಡೋಸ್ ಅಲ್ಲವೆ ಭಾರೀ ಬೇಗ ಏರುತ್ತಿತ್ತು.., ಮೈಯ ಸಹಸ್ರ ಸಹಸ್ರ ರೋಮಗಳೆಲ್ಲ ನಿಮಿರಲು ಆರಂಭ ವಾಯಿತು.., ಬ್ಯಾರಿ ಓಡಿ ಬಂದ ಎಂಥ ಮಾಡಿದ್ದು ಸಾಮಿ ಅನ್ನುತ್ತಾ ನನ್ನ ಬಳಿಗೆ ಬಂದ ನಾನು ಕಣ್ಣು ಕತ್ತಲೆ ಬಂದಂತಾಗಿ ಅವನ ಮೇಲೆ ಬಿದ್ದೆ.. ಬಾಯಲ್ಲಿ ನೊರೆ ಬಂದಂತಾ ಅನುಭವ., ಬ್ಯಾರಿ ಏಳಿ ಸಾಮಿ ಏಳಿ ಅನ್ನುತ್ತಾ ಇದ್ದ.., ಹಾಗೆಯೇ ಕೇಳುತ್ತಿತ್ತು.. ಮತ್ತೆ ಬೇರೆಯೇ ಸ್ವರ ಕೇಳಿದಂತಾಯಿತು.., ಹೆಂಗಸಿನ ಸ್ವರ "ಏಳು ಮಾರಯಾ ಏಳು ಏಂತಾಯಿತು ನಿಂಗೆ ಏಳು ಮಾರಾಯಾ.." ನಂಗೆ ನೋವಿನಲ್ಲಿಯೂ ಆಶ್ಚರ್ಯವಾಯಿತು.., ಅಮ್ಮನ ಸ್ವರ..!! ಮೈಯನ್ನು ಅಲುಗಾಡಿಸಲು ಕಷ್ಟವಾಗುತ್ತಿತ್ತು.., ಕಷ್ತದಿಂದ ಕಣ್ಣು ತೆರೆದೆ ಅಮ್ಮನ ಮುಖ ಕಾಣಿಸಿತು ನನ್ನನು ಜೋರಾಗಿ ಅಲುಗಾಡಿಸಿ ಕೇಳಿದರು "ಘಂಟೆ ಒಂಬತ್ತಾಯಿತು ಆಫೀಸಿಗೆ ಹೋಗುದಿಲ್ವಾ..?" ನಾನು ಬೆಚ್ಚಿ ಬಿದ್ದು ಎದ್ದು ಕುಳಿತು ಸುತ್ತಲೂ ನೋಡಿದೆ.., ಮಂಚದ ಮೇಲಿದ್ದೇನೆ ಗಡಿಯಾರದ ಮುಳ್ಲು ಗಂಟೆ ಒಂಬತ್ತಾಯಿತೆಂದು ತೋರಿಸುತ್ತಿತ್ತು.., ಕಣ್ಣು ಉಜ್ಜಿಕೊಂಡು ನೋಡಿದೆ.. ಹೌದು., ನಾನು ಇನ್ನೂ ಬದುಕಿದ್ದೇನೆ., ಮತ್ತೆ ಬಾಯಲ್ಲಿ ನೊರೆ ಬಂದದ್ದು ಹಾಗೆಯೇ ಉಂಟಲ್ಲಾ ಎಂದು ನೋಡಿದರೆ ಜೊಲ್ಲು.., ಮಗ್ಗಲು ಮಲಗಿದ ಕಾರಣ ಇರಬೇಕು.. ಭಗವಂತನಿಗೆ ಮನಸಲ್ಲಿಯೇ ಕೈ ಮುಗಿದು ಕನಸನ್ನು ನನಸು ಮಾಡಬೇಡಪ್ಪಾ ಎಂದು ಬೇಡಿ ಟವಲ್ ಹಿಡಿದುಕೊಂಡು ಬಾತ್ ರೂಮಿಗೆ ಓಡಿದೆ..
ಯಾಕೋ ಏನೋ.. ಕೆಲವೊಮ್ಮೆ ಮನಸಲ್ಲಿ ಏನೇನೋ.. ಆಲೊಚನೆಗಳು.. ಬರುತ್ತಿರುತ್ತವೆ.., ಅವುಗಳನ್ನು ಸ್ವಲ್ಪ ತಿದ್ದಿ ತೀಡಿ.. ಇಲ್ಲಿ ಹಾಕಿದ್ದೇನೆ.. ಓದಿ ನಿಮ್ಮ ಸಲಹೆಗಳನ್ನು.. ಬಯಸುತ್ತೇನೆ..
Popular Posts
-
ಮಳೆಗಾಲದ ರಾತ್ರಿ, ಹೊರಗಡೆ ಧೋ.. ಅಂತ ಮಳೆ ಸುರೀತಾ ಇತ್ತು, ಜಸ್ಟ್ ಊಟ ಮುಗಿಸಿದ್ದಷ್ಟೆ, ಟಿವಿ ಆನ್ ಮಾಡಿದ್ರೆ ನೋ ಸಿಗ್ನಲ್ ಅಂತ ತೋರಿಸ್ತಾ ಇತ್ತು, ನಮ್ಮದು ಡಿಶ್ ಟಿ...
-
ಅಂದು ಅವಳಂದಳು. ಓ ನಲ್ಲ.. ನೀನೇ ನನಗೆಲ್ಲ..; ಹೃದಯ ತುಂಬಿ ಬಂತು.., ಗೆಳೆಯನ ಮದುವೆಯಲ್ಲಿ..; ಷಡ್ರಸ ಭೋಜನವ ಉಂಡಾಗ.. ಆಗುವಂತೆ..!! ಮಗದೊಮ್ಮೆ ಬಿಗಿದಪ್ಪಿ... ತುಟಿಗೊ...
-
ವಾರೆ ನೋಟದಿ ನೋಡುವೆ ಯಾತಕೆ ನೋಟದಿ ನಿಜವೇನು..? ಮಿರ ಮಿರ ಮಿಂಚುವ ನೋಟವು ನಾಟಿ ಕಾಡುವ ಪರಿಯೇನು..? ಅಯ್ಯೋ.. ಕಾಡುವ ಪರಿಯೇನು..? ಕನಸಲೂ ಹೀಗೆ ಆಗಿದೆ ಯಾಕೆ...
-
ಉಂಡಾದ ಮೇಲೆ ಹೊಟ್ಟೆ ತುಂಬಿಹುದು; ಗುಂಡಾದ ಹೊಟ್ಟೆ ಭಾರವಾಗಿಹುದು, ಎಂದಿಲ್ಲದಂತೆ ಕಣ್ಣೆಳೆಯುತಿಹುದು; ಚಂದದಲಿ ನಿದ್ದೆ ಮಾಡಬೇಕಿಹುದು. ಹಸಿವೆಂಬ ಹೆಸರ ಉಂಡು ತೇಗಿ...
-
ದಿನವಿಡೀ ಮಳೆಯ ಹನಿಯಲಿ ನೆಂದು.. ದಿನವಿಡೀ ರವಿಯ ಕಿರಣದಿ ಬೆಂದು.., ದಿನವಿಡೀ.. ಹಸಿ ಹಸಿದು ನಿಂದರೂ... ಬಳಲಲಿಲ್ಲ ನಾನು... ನಿನ್ನ ಮೊಗದ ಆ ಚೆಲುವು... ನಿನ್...
-
ಬೊಗಸೆ ತುಂಬ ಪ್ರೀತಿ ತುಂಬಿ ಸೊಗಸುಗಾತಿ ಬಳಿಗೆ ಬರಲು, ನಗುವ ಮೀಟಿ ನುಡಿಸುತಿರಲು ಹಗಲು ಮರೆತೆ ಹೋಯಿತು.. ಜ್ವರವು ಏರಿ ಬೆಂದುಹೋಗಿ ಸ್ವರವು ನಡುಗಿ ಕರಗಿ ಹೋಗಿ,...
-
ರವಿಯು ವಿರಮಿಸಲು.. ಹೊರಟನು... ಶಶಿಯು ವಿಹರಿಸಲು ಹೊರಟನು.. . ಕವಿಯು ವಿವರಿಸಲು ಹೊರಟನು.. ರವಿಯ.. ಇಳಿ ವಯಸ್ಸು.. ಆಹಾ.. ಅದೆಂಥಾ.. ಸೊಗಸು.. ತೊಟ್ಟಿಹನು.....
-
ಅಂದು ಎದುರಲ್ಲಿ ಸಿಕ್ಕಳು ಆ ಹುಡುಗಿ.. ನಾನಂದೆ ನೀ ಸುಂದರ ಬೆಡಗಿ.. ಸುಂದರೀ ನೀ ನನ್ನ..; ಹೃದಯಕ್ಕೆ ಹಾಕಿದ್ದಿ ಕನ್ನ ಅವಳಂದಳು, ಅಣ್ಣ ಎಂದು ಭಾವಿಸಿದ್ದೆ ನಿನ್ನ..!! ನ...
-
ಮುಂಜಾವಿನ ಹನಿಯಲ್ಲಿ ಕರಗಿತು ಕನಸು..; ಕನಸು ಕರಗಿತಲ್ಲಾ ಎಂದು ಕ್ಶಣಕಾಲ ಮರುಗಿತು ಮನಸು.., ಶುರುವಾಯಿತು ನೋಡಿ ಹಕ್ಕಿಗಳ ಚಿಲಿಪಿಲಿ, ಹಾರಟದ ಬಿರುಸು ಆಗಸದಲ್ಲಿ ರವಿ...
-
ಮುಚ್ಚಿಟ್ಟ ಎದೆಯೊಳಗೆ ಬಚ್ಚಿದಾ ಭಾವಗಳು ಹಚ್ಚಿ ಹೆಚ್ಚಾಗುತಿದೆ ನೀ ಕಾಣಲು, ಹೆಚ್ಚೇನು ಹೇಳದಲೆ ಮೆಚ್ಚಿದಾ ಜೀವವನು ಅಚ್ಚೊತ್ತಿದೆದೆಯೊಳಗೆ ಈ ಪ್ರೀತಿಯು ಹಕ್ಕಿಗಳ ದೇಹಕೆ...
Wednesday, 25 July 2012
ಹೀಗೊಂದು ಕನಸು..!!!
ನಾನು ಅವತ್ತು ಕೂಡ ಎಂದಿನಂತೆ.. ಬೈಕಿನಲ್ಲಿ ಸುಳ್ಯಕ್ಕೆ ಹೋಗುತ್ತಾ ಇದ್ದೆ.., ಬೇಂಗಮಲೆ ಕಾಡಿನ ರಸ್ತೆ ಬದಿಯಲ್ಲಿ ಹಳದಿ ಬಣ್ಣದ ಎರಡು ಸರ್ಪಗಳು. ಆಟ ಆಡುತ್ತಿದ್ದವು (ಯಾವ ಆಟ ಅಂತ ಕೇಳ ಬೇಡಿ) ನಾನು ಬೈಕ್ ನಿಲ್ಲಿ ಸ್ವಲ್ಪ ಹೊತ್ತು ಬೆರಗಿನಿಂದ ಆ ಹಾವುಗಳ ಆಟವನ್ನೌ ನೋಡುತ್ತಾ ನಿಂತೆ.., ಕೂಡಲೇ ಯಾರೋ ಹೇಳಿದ್ದು ನೆನಪಾಯಿತು.. " ಈಗ ಇಡ್ತಲೆಗೆ ಮಾತ್ರ ಅಲ್ಲ ಮಾರಾಯ ಒಳ್ಳೆ ಹಳದಿ ಬಣ್ಣದ ಸರ್ಪಗಳಿಗೆ ಒಳ್ಳೆ ರೇಟು ಉಂಟು ಮಾರಾಯ ಎಲ್ಲಿಯಾದರೂ ಕಂಡರೆ ನಂಗೆ ಹೇಳು ಸುಳ್ಯದಲ್ಲಿ ನಂಗೆ ಒಬ್ಬ ಬ್ಯಾರಿ ಪರಿಚಯ ಇದ್ದಾನೆ.., ಅವ ರೇಟು ಫಿಕ್ಸ್ ಮಾಡ್ತಾನೆ.., ಒಂದು ಹಾವು ಸಿಕ್ಕಿದ್ರೆ., ಎರಡು ವರ್ಷದ ಜೀವನಕ್ಕೆ ಸಾಕು..," ಅಂತ ಹೇಳಿ ಅವನ ಸೆಲ್ಲ್ ನಂಬರ್ ಕೊಟ್ಟಿದ್ದ್ದು ನಂಗೆ ಮನಸಿನಲ್ಲಿ ಹೊಸ ಉತ್ಸಾಹ ಮೂಡಿತು.., ತಡ ಮಾಡಲಿಲ್ಲ ಬೈಕಿನ ಸೀಟಿನ ಅಡ್ಯಲ್ಲಿ ಅಗತ್ಯಕ್ಕೆ ಅಂತ ಮಡಚಿ ಇಟ್ಟ ಪ್ಲಾಸ್ಟಿಕ್ ಗೋಣಿಯಿಂದ ಮಾಡಿದ ಕೈ ಚೀಲವನ್ನು ತೆಗೆದೆ., ಹಾವುಗಳನ್ನು ಕಂಡರೆ ಸ್ವಲ್ಪ ಭಯ ಪಡುತ್ತಿದ್ದೆ.., ಯಾಕೋ ಎನೋ ಅವತ್ತು ಸ್ವಲ್ಪವೂ ಭಯವಾಗಲಿಲ್ಲ., ಆಟದಲ್ಲಿ ಮಗ್ನವಾಗಿದ್ದ ಎರಡು ಹಾವುಗಳ ಕತ್ತಿಗೆ ನೇರವಾಗಿ ಕೈ ಹಾಕಿ ಕೈ ಚೀಲದೋಳಗೆ ತುಂಬಿಸಿ ಚೀಲದ ಕೈಗೆ ಗಟ್ಟಿಯಾಗಿ ಗಂಟು ಹಾಕಿ. ಬೈಕಿನ ಹಾಂಡಲ್ ಗೆ ನೇತು ಹಾಕಿ ಅಂದು ಆತ ಕೊಟ್ಟಿದ್ದ ನಂಬರ್ ಗೆ ಕರೆ ಮಾಡಿದೆ.., ಆಕಡೆಯಿಂದ ಗಡುಸಾದು ಧ್ವನಿ.., " ಹಲೋ ಆರಿ.., ನಾನು ಹೇಳಿದೆ., " ಹಲೋ ಇದು ಕಿರಣ ಅಂತ ನೀವು ಮಮ್ಮದೆ ಅಲ್ಲವಾ..??" ಅವನು " ಹಾ ಎಂತ ಹೇಳಿ.. ನಾನು " ನಂಗೆ ಎರಡು ಹಳದಿ ಬಣ್ಣದ ಸರ್ಪಗಳು ಸಿಕ್ಕಿದೆ.., ನಿಮ್ಮ ರೇಟು ಎಷ್ಟು..?" ಅವನು " ಮಾಲು ನೋಡ್ಬೇಕು ಸಾಮಿ.., " ನಾನು" ಆಯ್ತು.. ಈಗ ಎಲ್ಲಿದ್ದೀರಿ...,? " ಅವನು " ಕಾಯರ್ತೋಡಿಯ ಗುಜುರಿ ಅಂಗಡಿಯಲ್ಲಿ ಇದ್ದೇನೆ ಅಲ್ಲಿಗೇ ತೆಕ್ಕೊಂಡು ಬನ್ನಿ." ನಾನು ಆಯ್ತು ಅಂತ ಹೇಳಿ ಕಾಲ್ ಕಟ್ ಮಾಡಿ ಮೊಬೈಲ್ ಅನ್ನು ಜೇಬಲ್ಲಿ ಇಟ್ಟು ಚೀಲವನ್ನು ಒಮ್ಮೆ ನೋಡಿ ಖಚಿತ ಪಡಿಸಿ ಬೈಕ್ ಸ್ತಾರ್ಟ್ ಮಾಡಿ ಶರವೇಗದಿಂದ (70km/hr maximum) ಸುಳ್ಯದ ಕಾಯರ್ತೋಡಿಯ ಗುಜುರಿ ಅಂಗಡಿಯತ್ತ ಓಡಿಸಿದೆ. 5 ನಿಮಿಷಗಳಲ್ಲಿ ಅವನ ಅಂಗಡಿಯ ಎದುರಿನಲ್ಲಿ ಇದ್ದೆ. ಅಂಗಡಿಯತ್ತ ನೋಡಿದಾಗ ಸುಮಾರು ರಟ್ಟುಗಳ ಅಟ್ಟಿ., ಹಳೆಯ ಗಾಜಿನ ಬಾಟಲಿಗಳು., ಕಬ್ಬಿಣದ ಹಳೆಯ ವಾಹನಗಳ ಬಿಡಿ ಬಾಗಗಳು ಇನ್ನೂ ಎನೋ ಏನೋ..,ದೇವಸ್ಥಾನದಲ್ಲಿ ನಡೆ ಇರುವಂತೆ ಮದ್ಯದಲ್ಲಿ ಒಳಗೆ ಹೋಗಲು ದಾರಿ.., ., ರಸ್ತೆಗೆ ಕಾಣುವಂತೆ ಮೇಜು , ಕುರ್ಚಿ ಹಾಕಿ ಕುಳಿತುಕೊಂಡು ಅದೇನೋ ಲೆಕ್ಕಾಚಾರ ಬರೆಯುತ್ತಿದ್ದ., ನಾನು ಚೀಲವನ್ನು ಚೀಲದ ಕೈಯಿಂದ ಹಿಡಿದು ಎತ್ತಿ ಅವನತ್ತ ತೋರಿಸಿ ಎರಡು ಉಂಟು ಎಂಬತೆ ಸನ್ನೆ ಮಾಡಿದೆ. ಯಾಕೆಂದರೆ ಕಾನೂನು ಬಾಹಿರ ವಿಚಾರ ಅಲ್ಲವೆ..? ಅವನೂ ಆಚೆ ಈಚೆ ನೋಡಿ ಅವನೂ ತನ್ನಿ ಎಂಬಂತೆ ಸನ್ನೆ ಮಾಡಿದ., ನಾನು ತಲೆಯಾಡಿಸಿ ಚೀಲದತ್ತ ನೋಡಿದಾಗ ಗಂಟು ಸ್ವಲ್ಪ ಸಡಿಲಾದಂತಾಯಿತು ಹಾವುಗಳು ಬಹುಷ ಒದ್ದಾಡುತ್ತಿರಬೇಕು.., ಬುಸುಗುಟ್ಟಿದಂತೆ ಕೇಳಿತು.., ಬಹುಷಃ ಸಿಟ್ತು ಬಂದಿರಬೇಕು.., ನಾನು ತಲೆ ಕೆಡಿಸಿಕೊಳ್ಳದೆ ಚೀಲದ ಕೈಯನ್ನು ಹಿಡಿದು ಅಂಗಡಿಯತ್ತ ಹೆಜ್ಜೆ ಹಾಕಿದೆ; ಕೂಡಲೇ ಹಾವುಗಳು ಕೋರಸ್ ನಲ್ಲಿ ಬುಸುಗುಟ್ತಿದಂತೆ ಕೇಳಿತು ಕೆಳಗೆ ಚೀಲದ ಬಾಯನ್ನು ನೋಡಿದೆ.., ಎರಡು ಹಾವುಗಳೂ ತಲೆಯನ್ನು ಹೊರಗೆ ಹಾಕಿ ಕೆಂಗಣ್ನಿನಿಂದ ಕೆಕ್ಕರಿಸಿ ನನ್ನನ್ನೇ ನೋಡಿ ಬುಸುಗುಟ್ತುತ್ತಿದ್ದವು., ನಾನು ಆಲೋಚನೆ ಮಾಡುವಷ್ಟರಲ್ಲಿ ಜಂಟಿಯಾಗಿ ನನ್ನ ಮೇಳೆ ಧಾಳಿಯಾಯಿತು. ಹೆಡೆಯೆತ್ತಿ ನನ್ನ ಮುಂಗೈಗೆ ಎರಡೂ ಹಾವುಗಳ ಹಲ್ಲುಗಳು ಬಲವಾಗಿ ಇರಿದವು., ನಾನು ಜೋರಾಗಿ ಕಿರುಚಿದೆ.., ಮೈಯೆಲ್ಲ ಝುಂ ಅನಿಸಿತು.., ವಿಷವೆಲ್ಲ ಮೈಯೇರುವ ಅಧ್ಬುತ ಅನುಭವವಾಯಿತು.., ಡಬ್ಬಲ್ ಡೋಸ್ ಅಲ್ಲವೆ ಭಾರೀ ಬೇಗ ಏರುತ್ತಿತ್ತು.., ಮೈಯ ಸಹಸ್ರ ಸಹಸ್ರ ರೋಮಗಳೆಲ್ಲ ನಿಮಿರಲು ಆರಂಭ ವಾಯಿತು.., ಬ್ಯಾರಿ ಓಡಿ ಬಂದ ಎಂಥ ಮಾಡಿದ್ದು ಸಾಮಿ ಅನ್ನುತ್ತಾ ನನ್ನ ಬಳಿಗೆ ಬಂದ ನಾನು ಕಣ್ಣು ಕತ್ತಲೆ ಬಂದಂತಾಗಿ ಅವನ ಮೇಲೆ ಬಿದ್ದೆ.. ಬಾಯಲ್ಲಿ ನೊರೆ ಬಂದಂತಾ ಅನುಭವ., ಬ್ಯಾರಿ ಏಳಿ ಸಾಮಿ ಏಳಿ ಅನ್ನುತ್ತಾ ಇದ್ದ.., ಹಾಗೆಯೇ ಕೇಳುತ್ತಿತ್ತು.. ಮತ್ತೆ ಬೇರೆಯೇ ಸ್ವರ ಕೇಳಿದಂತಾಯಿತು.., ಹೆಂಗಸಿನ ಸ್ವರ "ಏಳು ಮಾರಯಾ ಏಳು ಏಂತಾಯಿತು ನಿಂಗೆ ಏಳು ಮಾರಾಯಾ.." ನಂಗೆ ನೋವಿನಲ್ಲಿಯೂ ಆಶ್ಚರ್ಯವಾಯಿತು.., ಅಮ್ಮನ ಸ್ವರ..!! ಮೈಯನ್ನು ಅಲುಗಾಡಿಸಲು ಕಷ್ಟವಾಗುತ್ತಿತ್ತು.., ಕಷ್ತದಿಂದ ಕಣ್ಣು ತೆರೆದೆ ಅಮ್ಮನ ಮುಖ ಕಾಣಿಸಿತು ನನ್ನನು ಜೋರಾಗಿ ಅಲುಗಾಡಿಸಿ ಕೇಳಿದರು "ಘಂಟೆ ಒಂಬತ್ತಾಯಿತು ಆಫೀಸಿಗೆ ಹೋಗುದಿಲ್ವಾ..?" ನಾನು ಬೆಚ್ಚಿ ಬಿದ್ದು ಎದ್ದು ಕುಳಿತು ಸುತ್ತಲೂ ನೋಡಿದೆ.., ಮಂಚದ ಮೇಲಿದ್ದೇನೆ ಗಡಿಯಾರದ ಮುಳ್ಲು ಗಂಟೆ ಒಂಬತ್ತಾಯಿತೆಂದು ತೋರಿಸುತ್ತಿತ್ತು.., ಕಣ್ಣು ಉಜ್ಜಿಕೊಂಡು ನೋಡಿದೆ.. ಹೌದು., ನಾನು ಇನ್ನೂ ಬದುಕಿದ್ದೇನೆ., ಮತ್ತೆ ಬಾಯಲ್ಲಿ ನೊರೆ ಬಂದದ್ದು ಹಾಗೆಯೇ ಉಂಟಲ್ಲಾ ಎಂದು ನೋಡಿದರೆ ಜೊಲ್ಲು.., ಮಗ್ಗಲು ಮಲಗಿದ ಕಾರಣ ಇರಬೇಕು.. ಭಗವಂತನಿಗೆ ಮನಸಲ್ಲಿಯೇ ಕೈ ಮುಗಿದು ಕನಸನ್ನು ನನಸು ಮಾಡಬೇಡಪ್ಪಾ ಎಂದು ಬೇಡಿ ಟವಲ್ ಹಿಡಿದುಕೊಂಡು ಬಾತ್ ರೂಮಿಗೆ ಓಡಿದೆ..
Subscribe to:
Post Comments (Atom)
No comments:
Post a Comment