ಮಳೆಗಾಲದ ರಾತ್ರಿ, ಹೊರಗಡೆ ಧೋ.. ಅಂತ ಮಳೆ ಸುರೀತಾ ಇತ್ತು, ಜಸ್ಟ್ ಊಟ ಮುಗಿಸಿದ್ದಷ್ಟೆ, ಟಿವಿ ಆನ್ ಮಾಡಿದ್ರೆ ನೋ ಸಿಗ್ನಲ್ ಅಂತ ತೋರಿಸ್ತಾ ಇತ್ತು, ನಮ್ಮದು ಡಿಶ್ ಟಿವಿ, ಮಳೆ ಜೋರಾಗಿದ್ರೆ ಯಾವ ಚಾನೆಲ್ ತೋರ್ಸಕ್ಕಾಗಲ್ಲ ಅಂತ ಹಟ ಮಾಡುತ್ತೆ, ನಾನಾದ್ರೂ ಏನು ಮಾಡೋದು ಹೇಳಿ, ಅವಾಗ ನೆನಪಾಯಿತು ಲಾಪ್ ಟಾಪಿನಲ್ಲಿ ಮೂವೀ ನೋಡೋಣ ಅಂತ , ಆನ್ ಮಾಡಿ ಗಲಿವರ್ಸ್ ಟ್ರಾವೆಲ್., ನೋಡ್ತಾ ಇದ್ದೆ, ಅಮ್ಮ ಮಾಡಿದ ಹಲಸಿನ ಕಾಯಿ ಚಿಪ್ಸ್ ತಂದಿಟ್ಟುಕೊಂಡು ಹಾಸಿಗೆಯಲ್ಲಿ ಲಾಪ್ ಟಾಪ್ ಇಟ್ಟುಕೊಂಡು ನೋಡ್ತಾ ಇದ್ದೆ, ವಾಹ್ ಸೋ ಎಂಟರ್ ಟೇನಿಂಗ್ ಮೂವೀ ತುಂಬಾ ಇಷ್ಟ ಆಯ್ತು, ಆ ಇರುವೆ ಸೈಜಿನ ಸೈನಿಕರ ಯುದ್ದ, ಗಲಿವರನ ಕಾಮಿಡೀ, ಎಲ್ಲಾ. ಕೊನೇವರೆಗೂ ನೋಡಿದೆ ಮನಸ್ಸಲ್ಲಿ ಅದೇ ಮೂವಿ ಸ್ಟಿಲ್ಸ್ ಗಳು ಅನುರಣಿಸುತ್ತಾ ಇತ್ತು, ಮೊಬೈಲ್ ನಲ್ಲಿ ಟೈಮ್ ನೋಡಿದ್ರೆ 12.30 ಓಹ್ ಯಾವತೂ ಇಷ್ಟು ತಡವಾಗಿ ಮಲಗಿದ್ದೇ ಇಲ್ಲ, ಹತ್ತು ಹತ್ತುವರೆ ಆಗುವಾಗ ಒಂದು ಗೊರಕೆ ಹೊಡೆದು ಆಗುತ್ತಿತ್ತು ನಾಳೆ ಬೇರೆ ಬೇಗ ಆಫೀಸಿಗೆ ಹೋಗಬೇಕು, ಸೊಳ್ಳೆಗಳು ಧಾಳಿ ಮಾಡುವ ಅಂದಾಜಿ ಇತ್ತು, ಈ ಸೊಳ್ಲೆಗಳಿಗೆ ಇರುವ ಧಮ್ಮು ನಮ್ಮ ರಾಜಕಾರಣಿಗಳಿಗೂ ಇಲ್ಲ ನೋಡಿ, ರಭಸದಿಂದ ತಿರುಗುವ ಫ್ಯಾನ್ನೂ ಕ್ಯಾರೇ ಮಾಡಲ್ಲ. ಮುಸುಕು ಎಳಕೊಂಡು ಮಲಗಿಬಿಟ್ಟೆ, ಕಣ್ಣು ಉರೀತಾ ಇತ್ತು ಹಾಗೇ......
ಥತ್ ಈ ನಾಯಿಗಳು ಸರಿಯಾಗಿ ಮಲಗಕ್ಕೇ ಬಿಡೋದಿಲ್ಲ, ಸಿಕ್ಕಾಪಟ್ತೆ ಭಯಂಕರವಾಗಿ ಅರಚುತ್ತಾ ಇತ್ತು, ಆರೀತಿ ಅರಚಿದ್ದು ನಾನು ಕೇಳೇ ಇರಲಿಲ್ಲ, ಅಪ್ಪ ಕೋಣೆಯಿಂದ ಬೊಬ್ಬೆ ಹೊಡೆದರು " ನಾಯಿ ಅಷ್ಟು ಬೊಬ್ಬೆ ಹೊಡಿತಾವುಂಟು ಕೇಳುದಿಲ್ಲವಾ ನಿಂಗೆ..? ಹೋಗಿ ನೋಡ್ಕೊಂಡು ಬಾ " ಆದೇಶ ಕೊಟ್ರು, ನಂಗೆ ಮೊದಲೇ ಕಣ್ಣು ಉರಿತಾ ಇತ್ತು , ಈಗ ಮೈಯೆಲ್ಲ ಉರೀಲಿಕೆ ಶುರು ಆಯ್ತು, ಆದ್ರೇನು ಮಾಡೋದು ಹೇಳಿ ಆರ್ಡರ್ ಅಪ್ಪಂದಲ್ವಾ. ಟಾರ್ಚ್ ಹಿಡ್ಕೊಂಡು ಹೊರಗೆ ಬಂದೆ ಒಂದು ಕೋಲು ಕೈಲಿ ಹಿಡ್ಕೊಂಡೆ, ಈ ಸಾರಿ ನಾಯಿಗೆ ಒಂದು ಗತಿ ಕಾಣಿಸಲೇ ಬೇಕು ಅಂತ, ನಾಯಿಯ ಬೊಬ್ಬೇ ರೇಡಿಯೋದ ಕ್ರಿಕೆಟ್ ಕಾಮೆಂಟರಿಯ ಹಾಗೇ ಮುಂದುವರೀತಾನೇ ಇತ್ತು, ನನ್ನನ್ನು ನೋಡಿದ ಕೂಡಲೇ., ಸಚಿನ್ ಪಾಕಿಸ್ತಾನ ಮ್ಯಾಚಲ್ಲಿ ಸಿಕ್ಸ್ ಹೊಡೆದಾಗ ಕಾಮೆಂಟರಿ ಮಾಡುವ ರೀತಿಯಲ್ಲಿ ಅರಚಲು ಶುರು ಮಾಡಿತು, ಒಮ್ಮೆ ನನ್ನನ್ನು ನೋಡುತ್ತಾ ಒಮ್ಮೆ ರಬ್ಬರ್ ತೋಟದ ಕಡೆಗೆ ನೋಡುತ್ತಾ ಓಡಲು ಶುರು ಮಾಡಿತು, ನಂಗೆ ಆಶ್ಚರ್ಯ ನಾಯಿಯ ಈ ನಡವಳಿಕೆ ನೋಡಿ, ನನಗೂ ಏನೂ ಕಾಣಿಸಲೇ ಇಲ್ಲ, ಆದರೂ ನಾಯಿ ಬೊಗಳುವುದು ನಿಲ್ಲಿಸದೇ ನಿದ್ದೆ ಸಾಧ್ಯವೇ ಇಲ್ಲ, ಏನೋ ನೋಡಿಯೇ ಬಿಡೋಣ ಅಂತ ನಾಯಿಯನ್ನು ಹಿಂಬಾಲಿಸಿದೆ, ನಾಯಿ ಓಡುತ್ತಲೇ ಇತ್ತು ಅದರ ಸ್ಪೀಡಿಗೆ ನನಗೆಲ್ಲಿ ಆಗುತ್ತೆ..? ಆದರೂ ಓಡಿದೆ, ರಬ್ಬರ್ ತೋಟ, ಅಡಿಕೆತೋಟದಲ್ಲೆಲ್ಲಾ ಓಡಿಸಿತು., ಕೊನೆಗೆ ಬಂದು ನಿಂತದ್ದು ತೋಟದ ಹಿಂದಿನ ದಟ್ತ ಕಾಡು, ನಾನು ಇಷ್ಟರವರೆಗೆ ಅಲ್ಲಿಗೆ ಹೋಗಿರಲಿಲ್ಲ.. ಅಲ್ಲೂ ನಿಲ್ಲಲಿಲ್ಲ ನನಗೂ ಏದುಸಿರು ಬರುತ್ತಿತ್ತು, ಆಗ ಆವೇಶದಲ್ಲಿ ಓಡಿಬಂದೆ ಅಲ್ಲೇ ಪಕ್ಕದಲ್ಲಿ ಜುಳುಜುಳು ಹರಿಯುತ್ತಾ ಇತ್ತು ಒರತೆ ನೀರಿನ ಹರಿವು..,ಓಹ್ ಹೌದು ಮಳೆ ನಿಂತಿದೆ., ಸ್ವಲ್ಪ ನೀರು ಕುಡಿದು ಮೈಗೆಲ್ಲಾ ಚಿಮುಕಿಸಿದೆ., ಸುತ್ತಲೂ ಟಾರ್ಚ್ ಬೆಳಕು ಹಾಯಿಸಿದೆ ನಾಯಿ ಎಲ್ಲೂ ಕಾಣಲಿಲ್ಲ, ಜಾನಿ... ಜಾನಿ.... ಕೂಗಿದೆ.. ಬರೀ ಮಿಡತೆಗಳ ಮಿರಿ ಮಿರಿ ಸದ್ದು ಕಿವಿಕುಕ್ಕುತ್ತಿತ್ತು.. ನಾಯಿಯನ್ನ ಕೂಗುತ್ತಾ ಒಳಗೆ ಹೋದೆ.. ಸ್ವಲ್ಪ ಒಳಗಡೆ ಹೋದನಂತರ ದೂರದಲ್ಲಿ ಕ್ಷೀಣವಾಗಿ ಬೊಗಳುವ ಸದ್ದು ಕೇಳಿಸಿತು, ಧ್ವನಿ ಬಂದೆಡೆಗೆ ಪೊದರುಗಳನ್ನು ಸರಿಸುತ್ತಾ ಹೋದೆ., ಬಹುಷಃ ಅರ್ದ ಕಿಲೋಮೀಟರ್ ಹೋದ ನಂತ ನಾಯಿ ಒಂದು ದೊಡ್ಡ ಮರದ ಬುಡದಲ್ಲಿ ಹಾರೀ ಹಾರೀ ಬೊಗಳುತ್ತಿತ್ತು ಜತೆಗೆ ಏಟು ಬಿದ್ದಂತೆ ಕುಂಯೀ ಕುಂಯೀ ಅರಚುತ್ತಿತ್ತು, ಹತ್ತಿರ ಹೋಗಿ ನೋಡಿದರೆ ಅದರ ಮೈಯಲ್ಲೆಲ್ಲಾ ರಕ್ತ. ನನಗಂತೂ ಭಯವಾಯಿತು ಅದು ನೋಡುವೆಡೆಗೆ ತಿರುಗುವಷ್ಟರಲ್ಲಿ ... ಅಮ್ಮಾ....
ಆಹ್.. ಮೈಕಯ್ಯೆಲ್ಲಾ ನೋವು,, ಕಣ್ಣು ಬಿಡಲಾಗುತ್ತಿಲ್ಲ. ಮೈಯಲ್ಲೆಲ್ಲಾ ಚುಚ್ಚಿದಂತಹಾ ನೋವು.. ಕೈ ಕಾಲು ಮಿಸುಕಾಡಲಾಗುತ್ತಿಲ್ಲ ಸುತ್ತಲೂ ಬಿಗಿದು ಕಟ್ಟಿದ ಅನುಭವ., ಕಷ್ಟದಲ್ಲಿ ಕಣ್ಣುಬಿಟ್ಟು ನೋಡಿದೆ ಬರಿಯ ಆಕಾಶ ಕಾಣುತ್ತಿತ್ತು. ಆಸು ಪಾಸು ನೋಡಿದರೆ ನನ್ನ ಸಮಕ್ಕೆ ಇರುವ ಗಿಡಗಳು ನೋಡಲಿಕ್ಕೆ ಚೈನೀಸ್ ಬೋನ್ಸಾಯಿ ಮರಗಳಂತಿದ್ದವು.. ಬಹುಷಹ ಯಾವುದೋ ಗದ್ದೆ ಇರಬೇಕು., ಅಲ್ಲಾ ನಾನು ಇಲ್ಲಿಗೆ ಹೇಗೆ ಬಂದೆ..? ನಾಯಿ ಜತೆಗೆ ಮರದ ಬುಡಕ್ಕೆ ಬಂದೆ., ನಾಯಿಗೆ ಪೆಟ್ಟುಬಿದ್ದಿತ್ತು ಅಷ್ಟರಲ್ಲಿ ನನ್ನ ಬೆನ್ನಿಗೂ ಏನೋ ಒಂದು ಚುಚ್ಚಿದಂತೆ ಆಗಿತ್ತು, ಅಬ್ಬಾ ಒಮ್ಮೆ ಅಂತೂ ಅಸಾಧ್ಯ ನೋವು., ಆಮೇಲಂತೂ.. ಊಹೂಂ.. ಅಮೇಲೆ ಅದೇನೂ ನೆನಪಿಗೆ ಬರುತ್ತಿಲ್ಲ, ಸಣ್ಣಕ್ಕೆ ಮಾರ್ಚ್ ಫಾಸ್ಟ್ ಮಾಡುವಂತೆ ಸದ್ದು ಕೇಳಿಸಿತು, ಕತ್ತೆತ್ತಿ ನೋಡಿದೆ "ಓಹ್ ಮೈ ಗಾಡ್" ಮೈಯೆಲ್ಲಾ ಬೆವರಲು ಆರಂಭವಾಯಿತು., ಹೌದು ಕಣ್ಣುಗಳನ್ನೇ ನಂಬಲಾಗುತ್ತಿಲ್ಲ ಸ್ವಲ್ಪ ಹೊತ್ತಿನ ಮುಂಚೆ ನೋಡಿದ ಸಣ್ಣ ಸಣ್ಣ ಸೈನಿಕರು ಕಣ್ಣ ಮುಂದೆ.., ಆದರೆ ಆ ಸಿನೆಮಾದಲ್ಲಿದ್ದಂತೆ ಕತ್ತಿ ಗುರಾಣಿ, ರಾಜರುಗಳ ವೇಷಭೂಷಣಗಳು ಇರಲಿಲ್ಲ, ನಮ್ಮ ಮಿಲಿಟರೀ ಯೋಧರಂತೆ ಇದ್ದರು, ಕೈಯಲ್ಲಿ ಎ.ಕೆ ಫಾರ್ಟೀ ಸೆವೆನ್ ನಂತಹುದೇ ಬಂದೂಕುಗಳಿದ್ದವು. ಅಂದರೆ ನಾನು ನೋಡಿದ್ದು ಗದ್ದೆ ಅಲ್ಲ, ಕಾಡು..!!! ಒಂದು ಹೆಲಿಕಾಫ್ಟರ್ ನಂತಹುದು ದುಂಬಿಯ ಆಕಾರದಲ್ಲಿ ಹಾರಿಕೊಂಡು ಬಂತು., ಅದರಿಂದ ಏನೋ ಅರಚಿದಂತೆ ಕೇಳಿಸಿತು ಅರ್ಥವಾಗಲಿಲ್ಲ, ಕೆಳಗಿದ್ದ ಯೋಧರುಗಳು ಹೋ ಎಂಬಂತೆ ಶಬ್ದ ಮಾಡಿದರು., ದುಂಬಿಗಳ ಗುಂಪು ಬಂದಂತೆ ಸುಮಾರು ಹೆಲಿಕಾಫ್ಟರುಗಳು ಬಂದವು. ಅದರಿಂದ ನೂಲಿನಂತೆ ಕೆಳಕ್ಕಿಳಿಸಿದರು.., ಕೆಳಗಿದ್ದ ಸೈನಿಕರೆಲ್ಲಾ ನನ್ನ ಮೇಲೆಲ್ಲ ಹತ್ತಿ ಆ ನೂಲನ್ನು ನನಗೆ ಕಟ್ಟಿದ್ದ ನೂಲಿಗೆ ಬಿಗಿದರು ಮೊದಲು ಬಂದ ಹೆಲಿಕಾಫ್ಟರಿನಿಂದ ಅದೇನೋ ಆದೇಶವಾಯಿತು.., ಎಲ್ಲಾ ಹೆಲಿಕಾಫ್ಟರುಗಳು ಮೇಲಕ್ಕೆ ಹಾರತೊಡಗಿದವು ಓಹೋ ಇವರು ನನ್ನನ್ನು ಎಲ್ಲಿಗೋ ಸಾಗಿಸುತ್ತಿದ್ದಾರೆ.., ಅಲ್ಲೇ ಸ್ವಲ್ಪ ಮುಂದೆ ಹೋಗಿರಬಹುದು ಮೈಸೂರು ಅರಮನೆಯ ಸಣ್ಣ ಮಾಡೆಲ್ ನಂತಿತ್ತು ಅದರ ಮಧ್ಯದ ಆವರಣದಲ್ಲಿ ನನ್ನನ್ನು ಇಳಿಸಿದರು, ನನ್ನ ಸೊಂಟದ ಮೇಲಿನ ಬಂಧನಗಳನ್ನೆಲ್ಲಾ ಬಿಡಿಸಿದರು, ಎದ್ದು ಕುಳಿತುಕೊಳ್ಳುವಂತೆ., ನನಗೋ ಆಶ್ಚರ್ಯ.. ನಾನು ಬಂದಿದ್ದ ಕಾಡಿನ ಮಧ್ಯಕ್ಕೆ ಅಲ್ಲಿಗೂ ಇಲ್ಲಿಗೂ ಎಲ್ಲಿಯ ಸಂಭಂಧ ಅರ್ಥವೇ ಆಗಲಿಲ್ಲ, ಅಷ್ಟರಲ್ಲಿ ತುತ್ತೂರಿಯ ಶಬ್ದ ಕೇಳಿಸಿತು.., ಮೇಲಿನ ಉಪ್ಪರಿಗೆಯಲ್ಲಿ ನಾಲ್ಕಾರು ಅಂಗರಕ್ಶಕರೊಂದಿಗೆ ಒಬ್ಬಾತ ಬಂದ, ಇದ್ದವರಲ್ಲೆಲ್ಲಾ ಎತ್ತರದವ., ನಮ್ಮ ಮಿಲಿಟರೀ ಕಮಾಂಡರ್ ನಂತಹಾ ವೇಷ ಭೂಷಣ., ಮೈಕ್ ನಂತಹದು ಹಿಡಿದು ಅದೇನೋ ಒದರಿದ., ಅರ್ತವಾಗುವುದಿಲ್ಲ ಅಂದೆ., ಅವನ ಜತೆ ಇದ್ದ ಒಬ್ಬ ಮುಂದೆ ಬಂದು ಕನ್ನಡದಲ್ಲಿಯೇ ಮಾತನಾಡಿನ, "ಯಾರು ನೀನು ನಿನ್ನ ಹೆಸರೇನು., ನಮ್ಮ ಲೋಕಕ್ಕೆ ಯಾಕೆ ಬಂದೆ..?
"ನಾನು ನಿಮ್ಮಲ್ಲಿಗೆ ಬರಲಿಲ್ಲ, ನಾನು ಇಲ್ಲಿಗೆ ಹೇಗೆ ಬಂದೆನೋ ಅದೂ ಕೂಡ ಗೊತ್ತಿಲ್ಲ.., ನನ್ನ ನಾಯಿ ಹುಡುಕಿಕೊಂಡು ಬಂದೆ ನನ್ನ ಬೆನ್ನಿಗೆ ಯೇನೋ ಚುಚ್ಚಿದಂತಾಯಿತು. ನಂತರ ಏನಾಯಿತೆಂದು ಗೊತ್ತಿಲ್ಲ ಕಣ್ಣು ತೆರೆದಾಗ ಇಲ್ಲಿದ್ದೆ ಏನಾಯಿತೆಂದು ನೀವೇ ಹೇಳಿ.., ಇದು ಯಾವ ಲೋಕ ನಾನು ಇಲ್ಲಿಗೆ ಹೇಗೆ ಬಂದೆ., ಎಲ್ಲರೂ ಕಿವಿ ಮುಚ್ಚಿಕೊಂಡಂತೆ ಕಂಡಿತು, ಮೊದಲು ಮಾತನಾಡಿದಾತ, ನೀವೂ ನಿಮ್ಮ ನಾಯಿಯನ್ನೂ ನಮ್ಮ ಸೈನಿಕರೇ ಹೊತ್ತುಕಂಡು ಬಂದರು, ಆ ದೈತ್ಯ ಮರದ ಒಳಗೆ ಬಂದರೆ ನಮ್ಮ ಲೋಕ, ನಮ್ಮ ಲೋಕದ ಬಗ್ಗೆ ತಿಳಿದ ಕಾರಣ ನೀವಿನ್ನು ಹೊರಗೆ ಹೋಗುವಂತಿಲ್ಲ, ತಕರಾರು ಮಾಡಿದರೆ ವಿಷ ಚುಚ್ಚಿ ಕೊಂದು ಹಾಕಲಾಗುವುದು., ನಿನ್ನ ನಾಯಿಯನ್ನೂ ಭಂದಿಸಿದ್ದೇವೆ, ನಮ್ಮ ಮೃಗಾಲಯದಲ್ಲಿಟ್ಟಿದ್ದೇವೆ., ನೀವು ನಮ್ಮ ದೇಶವನ್ನು ಬೇರೆ ದೇಶದ ಸೈನಿಕರಿಂದ ರಕ್ಷಿಸಬೇಕು., "
"ಇಲ್ಲಾ ನನಗೆ ಮನೆಗೆ ಹೋಗಬೇಕು ಎಂದು ಅರಚಾಡಿದೆ., ಪುನಃ ಅದೆಲ್ಲಿಂದಲೋ ಬಂದು ಕತ್ತಿಗೆ ಏನೋ ಚುಚ್ಚಿತು., ಹಾ......
ಬೌ ಬೌ ಅಂತ ಬೊಗಳುವುದು ಕೇಳಿಸಿತು ಅಪ್ಪನ ಕೈಯಲ್ಲಿ ಬೈಸಿಕೊಳ್ಳುವುದು ಬೇಡ ಅಂದ ಧಡಲ್ಲನೆ ಎದ್ದು ಟಾರ್ಚ್ ಗಾಗಿ.. ತಡಕಾಡಿದೆ ಓಹ್ ನಾನು ಮನೆಯಲ್ಲಿಲ್ಲ ಎಂದು ನೆನಪಾಯಿತು., ಯಾವುದೋ ಒಂದು ಬಂಧೀಕಾನೆಯಲ್ಲಿದ್ದೆ ಬಹುಷ ಜಾನಿಯನ್ನೂ ಇಲ್ಲೇ ಎಲ್ಲೋ ಕೂಡಿಹಾಕಿರಬಹುದು., ಯಾಕೋ ಇಲ್ಲಿಂದ ಹೋಗುದು ಸಾಧ್ಯವಿಲ್ಲ ಅನಿಸಿತು,., ಆ ಗಲಿವರನ ಹಾಗೆ ಫೈಟಿಂಗೂ ಎಲ್ಲ ನಮಗೆಲ್ಲಿ ಬರುತ್ತೇ ರೀ.., ಅಪ್ಪ ಅಮ್ಮನ ನೆನಪಾಗಿ ಕಣ್ಣಲ್ಲಿ ನೀರು ಬಂತು., ಬೆಳಕು ಹರಿಯುತ್ತಾ ಬಂತು. ಬೆಳಗಾದಂತೆ ಒಂದು ಬಕೆಟ್ನಷ್ಟಾಗುವ ಪಾತ್ರೆಯಲ್ಲಿ ಅದೇನೋ ತಿನ್ನಲು ತಂದುಕೊಟ್ತರು., ಸಿಕ್ಕಾಪಟ್ಟೆ ಹಸಿವಾಗಿತ್ತು ಗಬಗಬನೆ ತಿಂದೆ., ಬಹಳ ರುಚಿಯೇನೂ ಇರಲಿಲ್ಲ, ತಿನ್ನುವಂತಿತ್ತು., ಕೂಡಲೇ ಹಲವಾರು ಸೈನಿಕರು ಹೆಲಿಕಾಫ್ಟರಿನಲ್ಲಿ ಬಂದು ನನ್ನ ಕೈಕಾಲುಗಳನ್ನು ಮೊದಲಿನಂತೆ ಬಿಗಿದರು., ಯಾರೋ ಬಂದು ಕೈ ಕಾಲುಗಳಲ್ಲಿ ಸಣ್ಣಕ್ಕೆ ಕೊರೆದು ಅದೇನೋ ಇಟ್ಟು ಹೊಲಿದರು.., ಸಿಕ್ಕಾಪಟ್ತೆ ಉರಿಯುತ್ತಿತ್ತು.., ಅವರೆಲ್ಲಾ ಹೋದರು ನಂತರ ಮೊದಲು ನನ್ನ ಬಳಿ ಕನ್ನಡದಲ್ಲಿ ಮಾತನಾಡಿದವನು ಬಂದು " ನೋಡಪ್ಪಾ ನಾವು ನಿನ್ನ ಮೈಯಲ್ಲಿ ಇಲೆಕ್ಟ್ರಾನಿಕ್ ಶಾಕಿಂಗ್ ಡಿವೈಸ್ ಅನ್ನು ಫಿಕ್ಸ್ ಮಾಡಿದ್ದೇವೆ., ನೀನೇನಾದರೂ ಅಧಿಕಪ್ರಸಂಗ ಮಾಡಿದರೆ.." ಅಂದು ತನ್ನ ಕೈಯಲ್ಲಿದ್ದ ರಿಮೋಟನ್ನು ನನ್ನತ್ತ ಹಿಡಿದು ಅಮುಕಿದ, ಮೈಯಲ್ಲೇ ಜುಂ.. ಅಂತ ನಡುಗಿತು ತಲೆತಿರುಗುವಂತಹಾ ಆಘಾತ, ವಿಪರೀತ ಸುಸ್ತು., ಮೈಯೆಲ್ಲಾ ಬೆವರಿರು, ಬಾಡೀಲಿದ್ದ ರಕ್ತ ಎಲ್ಲಾ ಬತ್ತಿದ ಹಾಗೆ ಆಯಿತು, "ಬೇಡ ಬೇಡ ನೀವು ಹೇಳಿದ ಹಾಗೇ ಮಾಡುತ್ತೇನೆ" ಅಂತ ಬೇಡಿಕೊಂಡೆ ಅವನು ನಕ್ಕು ಅಲ್ಲಿಂದ ಹೋದ.., ನಾಲ್ಕು ದಿನಗಳು ಹೀಗೇ ಸಾಗಿತು., ಮೈಯೆಲ್ಲಾ ವಿಪರೀತ ಕಡಿಯುತ್ತಿತ್ತು., ಒಂದು ಬೆಳಿಗ್ಗೆ ಆತ ಓಡಿಕೊಂಡು ಬಂದ ಬೇಗ ತಯಾರಾಗು ಶತ್ರು ದೇಶದವರು ನಮ್ಮನ್ನು ಆಕ್ರಮಿಸುತ್ತಿದ್ದಾರೆ.., ಬೇಗ ಹೊರಡು, ನೀನು ನಿನ್ನ ನಾಯಿ ಇಬ್ಬರೇ ಹೋದರೆ ಅವರನ್ನು ಓಡಿಸಬಹುದು, ನಮ್ಮವರನ್ನು ಕಳುಹಿಸಿದರೆ ಹೆಚ್ಚಿನವರು ಸಾಯುತ್ತಾರೆ., ನಮ್ಮ ಸೈನ್ಯ ಅವರಷ್ಟು ಬಲಿಷ್ಟವಿಲ್ಲ., ಬೇಗ ಹೋಗು ಎಂದು ನನ್ನ ಸೈಸಿಗೆ ಸರಿಯಾಗುವ ಒಂದು ಬಂದೂಕನ್ನು ಕೊಟ್ಟರು., ನನಗೆ ನಗು ಬಂತು., ಇವರನ್ನೇ ನನಗೇನೂ ಮಡಲಾಗಲಿಲ್ಲ ಇನ್ನು ಇವರಿಂದ ಪವರ್ಫುಲ್ ಆಗಿರುವ ಅವರನ್ನು... ನಾನು ಸೋಲಿಸಬಲ್ಲೆನೇ., ವಿಷಾದದ ನಗೆಯೊಂದು ಮನದಲ್ಲಿ ಸುಳಿಯಿತು., ಆದರೆ ಹೇಳಲು ಧೈರ್ಯ ಸಾಲಲಿಲ್ಲ, ನೀರಿಗೆ ಬಿದ್ದವನಿಗೆ ಮಳೆಯೇನು ಚಳಿಯೇನು..? ನನ್ನ ಆಯುಷ್ಯ ಮುಗಿಯುತ್ತಾ ಬಂದಿರಬಹುದು.. ಅನ್ನಿಸಿ ಮನೆ ಬಂಧು ಬಳಗಗಳನ್ನೆಲ್ಲಾ ನೆನಪಾಗಿ ಕಣ್ಣಲ್ಲಿ ನೀರು ಬಂತು.., ಸ್ವಲ್ಪ ಹೊತ್ತಲ್ಲಿ ಆತ ಮತ್ತೆ ಬಂದು ಬಾ ಅವರು ಧಾಳಿ ಸುರುಮಾಡಿದ್ದಾರೆ.., ನಾನು ಮೆಲ್ಲಗೆ ಎದ್ದು. ನಿಂತೆ ನಡೆಯಲು ಕಷ್ಟವಾಗುತ್ತಿತ್ತು, ಆತ ಮೈಕ್ ಹಿಡಿದು ಅರಚಿ ರಿಮೋಟ್ ತೋರಿಸಿದ., ಬೆತ್ತ ಕಂಡ ನಾಯಿಯಂತಾಯಿತು ನನ್ನ ಪರಿಸ್ತಿತಿ, ಅದೂ ಈ ಹುಡಿಗಳ ಮುಂದೆ, ಈ ಬಾಳಿಗಿಂತ ಅವರೆದುರು ಸಾಯುವುದೇ ವಾಸಿ ಅನ್ನಿಸಿತು., ಇದ್ದ ಬದ್ದ ಶಕ್ತಿ ಎಲ್ಲಾ ಹಾಕಿ ಶತ್ರು ಸೈನ್ಯದ ಮುಂದೆ ಬಂದು ನಿಂತೆ., ನನ್ನನ್ನು ನೋಡಿದ ಶತ್ರು ಸೈನ್ಯ ಹೆದರಿ ಹೋಯಿತು., ಆದರೆ ಓಡಿ ಹೋಗಲಿಲ್ಲ ಕೂಡಲೇ ಒಂದು ಟ್ಯಾಂಕರಿನಿಂದ ಬಾಂಬ್ ಹಾರಿಸಿದರು ಅನ್ನಿಸುತ್ತೆ., ನನ್ನ ನೇರಕ್ಕೆ ಬಂತು., ನಮ್ಮ ದೀಪಾವಳಿಯ ಬಾಂಬಿನಂತಿತ್ತು ಎಷ್ಟು ತಪ್ಪಿಸಿಕೊಂಡರೂ ನನ್ನ ಕೈಗೆ ಬಡಿಯಿತು., ಆ ಅಂತ ಕಿರುಚಿದೆ.., ನಾನು ಓಡಿ ಬರಲು ಆಲೋಚಿಸುತ್ತಿರುವಾಗ ರಿಮೋಟ್ ನೆನಪಾಗಿ ಪುನಹ ಶತ್ರು ಸೈನ್ಯದತ್ತ ಆದದ್ದಾಗಲಿ ಎಂದು ಮುನ್ನುಗ್ಗಿದೆ.. ಆ ಎಂದು ಅರ್ನಾಲ್ಡ್ ಸ್ತೈಲಲ್ಲಿ ಕಿರುಚುತ್ತಾ ನನಗೆ ಕೊಟ್ತ ಬಂದೂಕಿನ್ನಲ್ಲಿ ಒಟ್ಟು ಗುಂಡು ಹಾರಿಸುತ್ತಾ ಅವರತ್ತ ಮುನ್ನುಗ್ಗಿದೆ.. ಅವರು ಸಣ್ನ ಬಂದೂಕುಗಳಿಂದಲೂ ಒಂದೇ ಸಮನೆ ನನ್ನತ್ತ ಗುಂಡು ಹಾರಿಸುತ್ತಿದ್ದರು ಮೈಯಲ್ಲೆಲ್ಲಾ ಸಣ್ಣ ಸಣ್ನ ತೂತುಗಳಾಗಿ ರಕ್ತ ಸುರಿಯಲಾರಂಭಿಸಿತು.., ಅದೇನು ಮದ್ದು ಹಾಕಿ ತಾಯಾರಿಸಿದ್ದರೋ ಏನೋ ಮೈ ವಿಪರೀತ ತುರಿಸುತ್ತಿತ್ತು.., ಸಿಕ್ಕ ಸಿಕ್ಕ ಕಡೆಗೆಲ್ಲಾ ವಿಪರೀತ ಗುಂಡು ಹಾರಿಸುತ್ತಿದ್ದೆ., ಮೈ ತುರಿಕೆ ತಡೆಯಲಾಗುತ್ತಿಲ್ಲ.. ಬಂದೂಕು ಬಿಸಾಡಿ ಮೈಯೆಲ್ಲಾ ತುರಿಸಲಾರಂಭಿಸಿದೆ.., ತಕ್ಷಣಕ್ಕೆ ಅವರ ಟ್ಯಾಂಕರ್ ನಿಂದ ಒಂದು ದೊಡ್ದ ಬಾಂಬ್ ತೆಗೆದು ನೇರ ನನ್ನ ತಲೆಗೆ ಗುರಿಯಿಟ್ಟರೂ ಅನಿಸುತ್ತೆ.. ನೇರವಾಗಿ ಬಂದು ಹಣೆಗೆ ಅಪ್ಪಳಿಸಿತ್ತು.., ಕಿವಿಯೆಲ್ಲಾ ಗುಂಯೀ.. ಎನ್ನುತ್ತಿತ್ತು, ತಲೆ ಹೋಳಾದಂತೆ ಅನಿಸಿತು., ಬಹುಷಃ ನನ್ನ ದೇಹ ಉರುಳುತ್ತಿದೆ ಅನ್ನಿಸಿತು.., ಕಣ್ಣು ಮಂಜಾಗುತ್ತಿತ್ತು., ಅವರು ಹರ್ಷೋದ್ಗಾರ ಮಾಡುತ್ತಿದ್ದರು.. ನೇರ ದಬಾರೆಂದು ನೆಲಕ್ಕೆ ಬಿದ್ದೆ., ನನ್ನ ಜೀವನ ಇಷ್ಟಕ್ಕೇ ಅನಿಸುತ್ತಾ ಕಣ್ಣು ಮುಚ್ಚತೊಡಗಿತು ಉಸಿರು ಎಳೆಯತೊಡಗಿತು.., ಬಹುಷ ಕೊನೆಯುಸಿರು..., ..........................................................
ಯಾರೋ ಬಂದು ನನ್ನ ಜೋರು ಅಲುಗಾಡಿಸಿದರು ಬಹುಷಃ ಸ್ವರ್ಗದ ಅಧಿಕಾರಿಗಳಿರಬಹುದು., "ಏಳಪ್ಪಾ ಮೇಲೆ.., ಯಾಕೆ ಸೇಂಕುತಾ (ಸೇಂಕು=ಏದುಸಿರು ಬಿಡು ) ಇದ್ದೆ..? ಹಾಗೆ ಮುಸುಕು ಹಾಕಿ ಮಲಗಿದರೆ ಸೇಂಕದೆ ಮತ್ತೆಂತ ಆಗ್ತದೆ.., ನನ್ನ ಅಪ್ಪ..!!! ನಾನು ಮುಸುಕು ಎಸೆದು ಕುಳಿತು ಸುತ್ತಲೂ ನೋಡಿದೆ.ಹೌದು ಮನೆಯಲ್ಲೇ ಇದ್ದೇನೆ.. ಮೈಯೆಲ್ಲಾ ತುರಿಸುತ್ತಲೇ ಇತ್ತು., ಎದ್ದು ಮೈಯೆಲ್ಲಾ ನೋಡಿಕೊಂಡೆ., ಮೈಯಲ್ಲಿ ಸಣ್ಣ ಇರುವೆಗಳು ಹರಿಯುತ್ತಾ ಇತ್ತು.., ಓಹ್ ನಿನ್ನೆ ರಾತ್ರಿ ಹಾಸಿಗೆಯಲ್ಲಿ ಚಿಪ್ಸ್ ತಿಂದ ಪರಿಣಾಮ ಈ ಇರುವೆಗಳು ಅಂದುಕೊಂಡು ಇರುವೆಗಳನ್ನು ಕೊಡವಿಕೊಂಡು, ಎದ್ದು ಹೊರಗೆ ಮೈ ತುರಿಸುತ್ತಾ ಬಂದೆ., ಜಾನಿ ಬಾಲ ಅಲ್ಲಾಡಿಸುತ್ತಾ.. ಬಂದು ಕಾಲು ನೆಕ್ಕಿತು., ಮನಸ್ಸು ಹಗುರಾಯಿತು, ಇನ್ನು ತಡ ರಾತ್ರಿಯವರೆಗೆ ಸಿನೆಮಾ ನೋಡಬಾರದು ಅದರಲ್ಲೂ.., ಇಂಗ್ಲೀಷ್ ಸಿನೆಮಾಗಳನ್ನಂತೂ ನೋಡಲೇ ಬಾರದು ಅಂತ ನಿರ್ಧಾರ ಮಾಡಿದೆ..
