ಅದೊಂದು ವಸಂತಕಾಲ, ಒಂದು ಸ್ಥಳದಲ್ಲೊಂದು ಮರ ಬೆಳೆದಿತ್ತು. ತುಂಬು ಹರೆಯದ ಮರ., ಹೂ ಬಿಡುತ್ತಿತ್ತಷ್ಟೆ. ಒಂದು ಒಂಟಿ ಕೋತಿಗೆ ಆ ಮರ ಇಷ್ಟವಾಯಿತು. ಮರದ ಸುತ್ತಲೂ ಲಾಗ ತೆಗೆದು ಮರಕ್ಕೆ ಆತ್ಮೀಯವಾಯಿತು., ಮರದಲ್ಲಿ ಜಾಗ ಸಂಪಾದಿಸಿತು. ಮರಕ್ಕೆ ಅದೇನು ಖುಷಿಯಾಯಿತೋ ಗೊತ್ತಿಲ್ಲ. ಆದಷ್ಟು ಬೇಗ ಹಣ್ಣುಗಳನ್ನು ಕೊಟ್ಟಿತು, ಕೋತಿ ಮರ ಬಿಟ್ಟು ಎಲ್ಲಿಗೂ ಹೋಗಲಿಲ್ಲ. ಮರ ಹಣ್ಣು ಕೊಡುತ್ತಲೇ ಇತ್ತು., ಕೋತಿ ಆಸ್ವಾದಿಸುತ್ತಲೇ ಇತ್ತು.. ಕೊನೆಗೊಂದು ದಿನ ಬದಲಾಯಿತು ಋತು.. ಹಣ್ಣುಗಳು ಖಾಲಿಯಾದವು.. ಎಲೆಗಳು ಉದುರಲಾರಂಭಿಸಿದವು., ಕೋತಿಗೆ ಹಣ್ಣು ದೊರಕಲಿಲ್ಲ ಹತಾಶೆಯಿಂದ ಮರವನ್ನು ಕುಲುಕಿಸಿತು.., ಇದ್ದ ಎಲೆಗಳೂ ಉದುರಿತು.., ಸುತ್ತಲೂ ನೋಡಿದಾಗ ದೂರದಲ್ಲಿ ಹಚ್ಚಹಸಿರಾದ ಹೂ ಭರಿತ ಮರ ಕಂಡಿತು,, ನೆಗೆಯಿತು ಪಕ್ಕದ ಮರಕ್ಕೆ, ಮರದಿಂದ ಮರಕ್ಕೆ., ಸೇರು ಆ ಹಸಿರು ಮರವನ್ನು ಉದ್ವೇಗದಿಂದ.., ಸಂತೋಷದಿಂದ..
ಮೊದಲಿನ ಮರಕ್ಕೆ ಉಳಿದದ್ದು., ಉದುರಿದ ಎಲೆಗಳು., ಕೋತಿ ಜಗಿದು. ಉಗಿದ ಹಣ್ಣಿನ ಸಿಪ್ಪೆಗಳು., ಮಂಜಿನ ಹನಿಗೆ ಮೊಳಕೆಯೊಡೆದ ಬೀಜಗಳು.., ಆದರೂ ದುಖದಿಂದ ಮುಂದಿನ ಋತುವಿಗಾಗಿ. ಆಗಸದತ್ತ ಕೈಚಾಚಿ ಬೇಡುತ್ತಿತ್ತು.......
