ರವಿಯು ವಿರಮಿಸಲು.. ಹೊರಟನು...
ಶಶಿಯು ವಿಹರಿಸಲು ಹೊರಟನು.. .
ಕವಿಯು ವಿವರಿಸಲು ಹೊರಟನು..
ರವಿಯ.. ಇಳಿ ವಯಸ್ಸು..
ಆಹಾ.. ಅದೆಂಥಾ.. ಸೊಗಸು..
ತೊಟ್ಟಿಹನು.. ಕಿತ್ತಳೆ ಬಣ್ಣದ ದಿರಿಸು..
ಶಶಿಯೇನು.. ಕಮ್ಮಿ..
ತಿಳಿ ಹಾಲಿನ.. ಬಿಳುಪು
ಎಳೆ ಕಂದನ.. ಕಂಗಳ ಹೊಳಪು..
ರವಿಯು ಒರಗಿಯೇ ಬಿಟ್ಟ..
ಭೂ ತಾಯಿಯ ಮಡಿಲಲ್ಲಿ..
ಸಾಗರವ ಹೊದಿಕೆ ಮಾಡಿಬಿಟ್ಟು...
ಶಶಿಯೇರಿ.. ಆಗಸವ.. ತಾರೆಗಳ..
ಒಡನಾಡಿ... ಮೋಡದಾ.. ಉಯ್ಯಾಲೆಯಲಿ
ಹೊಸ ಕನಸ ಬಿತ್ತಿಹನು ಪ್ರೇಮಿಗಳ ಮನದಲ್ಲಿ..
ಹಸೆಗೊರಗಿ ಮಲಗುವಾ.. ಹೊತ್ತಲ್ಲಿ...
ದಣಿದ ಮೈ ಮನಗಳು.. ಕನಸ ಕಾಣುವ ಹೊತ್ತು..
ಹೊತ್ತು ತಂದಂತೆ ಕಡಲಾಳದಿಂದ... .
ಹೊಳೆಯುವ.. ಮುತ್ತು...

ಚೆನ್ನಾಗಿದೆ.. ಮುಂದುವರೆಸಿ :)
ReplyDelete