ಮುಚ್ಚಿಟ್ಟ ಎದೆಯೊಳಗೆ
ಬಚ್ಚಿದಾ ಭಾವಗಳು
ಹಚ್ಚಿ ಹೆಚ್ಚಾಗುತಿದೆ ನೀ ಕಾಣಲು,
ಹೆಚ್ಚೇನು ಹೇಳದಲೆ ಮೆಚ್ಚಿದಾ ಜೀವವನು
ಅಚ್ಚೊತ್ತಿದೆದೆಯೊಳಗೆ ಈ ಪ್ರೀತಿಯು
ಹಕ್ಕಿಗಳ ದೇಹಕೆ ರೆಕ್ಕೆ ಮೂಡಿದ ರೀತಿ
ಪಕ್ಕೆಗಳ ಗೂಡೊಳಗೆ
ನಕ್ಕು ಬೆಳೆದಿದೆ ಪ್ರೀತಿ,
ನಕ್ಕಾಗ ಮಗುವಾಗಿ
ಅಕ್ಕರೆಯ ಸಿಹಿಯಾಗಿ
ಒಕ್ಕೂಟದಲಿ ಬಲವು ಈ ಪ್ರೀತಿಯು
ಬಣ್ಣಗಳ ಲೋಕ ಹಣ್ಣಿನಂತಹ ಸವಿಯು
ಹೆಣ್ಣಿನಾ ವಾತ್ಸಲ್ಯದಾ ಚಿಲುಮೆಯು,
ಕಣ್ಣಿಗೆರಚುವ ತಂಪು
ಬೆಣ್ಣಿಗಿಹ ಮೆದುವು
ನಮ್ಮ ಜನುಮದ ಜೀವ ಈ ಪ್ರೀತಿಯು
ಬಚ್ಚಿದಾ ಭಾವಗಳು
ಹಚ್ಚಿ ಹೆಚ್ಚಾಗುತಿದೆ ನೀ ಕಾಣಲು,
ಹೆಚ್ಚೇನು ಹೇಳದಲೆ ಮೆಚ್ಚಿದಾ ಜೀವವನು
ಅಚ್ಚೊತ್ತಿದೆದೆಯೊಳಗೆ ಈ ಪ್ರೀತಿಯು
ಹಕ್ಕಿಗಳ ದೇಹಕೆ ರೆಕ್ಕೆ ಮೂಡಿದ ರೀತಿ
ಪಕ್ಕೆಗಳ ಗೂಡೊಳಗೆ
ನಕ್ಕು ಬೆಳೆದಿದೆ ಪ್ರೀತಿ,
ನಕ್ಕಾಗ ಮಗುವಾಗಿ
ಅಕ್ಕರೆಯ ಸಿಹಿಯಾಗಿ
ಒಕ್ಕೂಟದಲಿ ಬಲವು ಈ ಪ್ರೀತಿಯು
ಬಣ್ಣಗಳ ಲೋಕ ಹಣ್ಣಿನಂತಹ ಸವಿಯು
ಹೆಣ್ಣಿನಾ ವಾತ್ಸಲ್ಯದಾ ಚಿಲುಮೆಯು,
ಕಣ್ಣಿಗೆರಚುವ ತಂಪು
ಬೆಣ್ಣಿಗಿಹ ಮೆದುವು
ನಮ್ಮ ಜನುಮದ ಜೀವ ಈ ಪ್ರೀತಿಯು
No comments:
Post a Comment