ಉಂಡಾದ ಮೇಲೆ ಹೊಟ್ಟೆ ತುಂಬಿಹುದು;
ಗುಂಡಾದ ಹೊಟ್ಟೆ ಭಾರವಾಗಿಹುದು,
ಎಂದಿಲ್ಲದಂತೆ ಕಣ್ಣೆಳೆಯುತಿಹುದು;
ಚಂದದಲಿ ನಿದ್ದೆ ಮಾಡಬೇಕಿಹುದು.
ಹಸಿವೆಂಬ ಹೆಸರ ಉಂಡು ತೇಗಿಹುದು;
ಅಸುವಲ್ಲಿ ಉಸಿರು ಧೀರ್ಘವಾಗಿಹುದು,
ಬಿಸಿಲಲ್ಲಿ ಬಿಸಿಗಾಳಿ ಮುತ್ತಿಕ್ಕುತಿಹುದು;
ಹೆಸರೇಳದಾ ಜಡವು ತಲೆಯೇರುತಿಹುದು.
ಕೆಲಸಗಳು ಮನದಲ್ಲಿ ಆಕಳಿಸುತಿಹುದು;
ಹಲಸಂತೆ ಜಡವಾಗಿ ನೇತಾಡುತಿಹುದು,
ಮೆಲುವಾಗಿ ಮದ್ಯಾಹ್ನ ಮಂಜಾಗುತಿಹುದು;
ಹುಲುಸಾದ ಬಣ್ಣಗಳು ಕನಸಾಗುತಿಹುದು..
.
ಗುಂಡಾದ ಹೊಟ್ಟೆ ಭಾರವಾಗಿಹುದು,
ಎಂದಿಲ್ಲದಂತೆ ಕಣ್ಣೆಳೆಯುತಿಹುದು;
ಚಂದದಲಿ ನಿದ್ದೆ ಮಾಡಬೇಕಿಹುದು.
ಹಸಿವೆಂಬ ಹೆಸರ ಉಂಡು ತೇಗಿಹುದು;
ಅಸುವಲ್ಲಿ ಉಸಿರು ಧೀರ್ಘವಾಗಿಹುದು,
ಬಿಸಿಲಲ್ಲಿ ಬಿಸಿಗಾಳಿ ಮುತ್ತಿಕ್ಕುತಿಹುದು;
ಹೆಸರೇಳದಾ ಜಡವು ತಲೆಯೇರುತಿಹುದು.
ಕೆಲಸಗಳು ಮನದಲ್ಲಿ ಆಕಳಿಸುತಿಹುದು;
ಹಲಸಂತೆ ಜಡವಾಗಿ ನೇತಾಡುತಿಹುದು,
ಮೆಲುವಾಗಿ ಮದ್ಯಾಹ್ನ ಮಂಜಾಗುತಿಹುದು;
ಹುಲುಸಾದ ಬಣ್ಣಗಳು ಕನಸಾಗುತಿಹುದು..
.
