ಮುನಿದಿಹಳು ನೆಲದಮ್ಮ. ಕೆನೆದಿಹನು ಮಳೆಯಣ್ಣ
ಸನಿಹದಲಿ ಸೆಳೆದೊಯ್ದು ಪ್ರತಿಕಾರ ತೀರಿಸಿದಳು
ಶನಿರೂಪದಲಿ ಬಂದು., ಗತತೊಳೆದು ನಗುತಿಹಳು
ಮಿತವಿರದ ಮಾನವಗೆ ಶತಬಾರಿ ಹೇಳಿದಳು
ಲತೆಯಂತೆ ಹರಿದಿಹಳು, ಕಥೆಹೇಳಿ ಹೋಗಿಹಳು
ಮಿತಿಮೀರಿ ನಡೆದವನು ವ್ಯಥೆಯಾಗಿ ಹೋಗಿಹನು
ಇನ್ನಾದರೂ ಬರಲಿ, ಮಿತಿಯೊಳಗಿನಾ ಬುದ್ದಿ
ಮಣ್ಣ ಮಕ್ಕಳುನಾವು ನೆನಪಿರಲಿ ಋಣಭಾರ
ಕಣ್ಣೆದುರಿನಾ ದೇವಿ ನಗುತಿರಲಿ ಹರುಷದಲಿ..
ಸನಿಹದಲಿ ಸೆಳೆದೊಯ್ದು ಪ್ರತಿಕಾರ ತೀರಿಸಿದಳು
ಶನಿರೂಪದಲಿ ಬಂದು., ಗತತೊಳೆದು ನಗುತಿಹಳು
ಮಿತವಿರದ ಮಾನವಗೆ ಶತಬಾರಿ ಹೇಳಿದಳು
ಲತೆಯಂತೆ ಹರಿದಿಹಳು, ಕಥೆಹೇಳಿ ಹೋಗಿಹಳು
ಮಿತಿಮೀರಿ ನಡೆದವನು ವ್ಯಥೆಯಾಗಿ ಹೋಗಿಹನು
ಇನ್ನಾದರೂ ಬರಲಿ, ಮಿತಿಯೊಳಗಿನಾ ಬುದ್ದಿ
ಮಣ್ಣ ಮಕ್ಕಳುನಾವು ನೆನಪಿರಲಿ ಋಣಭಾರ
ಕಣ್ಣೆದುರಿನಾ ದೇವಿ ನಗುತಿರಲಿ ಹರುಷದಲಿ..