Popular Posts

Wednesday, 28 March 2012

ಕಾಯುವೆನು ನಾನು..!!!

ದಿನವಿಡೀ ಮಳೆಯ ಹನಿಯಲಿ ನೆಂದು..
ದಿನವಿಡೀ ರವಿಯ ಕಿರಣದಿ ಬೆಂದು..,
ದಿನವಿಡೀ.. ಹಸಿ ಹಸಿದು ನಿಂದರೂ...
ಬಳಲಲಿಲ್ಲ ನಾನು...

ನಿನ್ನ ಮೊಗದ ಆ ಚೆಲುವು...
ನಿನ್ನೆ ನೀ ತೋರಿದ ಒಲವು..
ನಿನ್ನ ಸುಂದರ ನಿಲುವು...
ಕಾಣದೆ ಸೋರುತ್ತಿದೆ ನನ್ನ ಬಲವು..

ಬಸವಳಿದು ಬೆಂಡಾಗಿಹೆನು ನಾನು...
ಓ ಪ್ರಿಯತಮೇ....
ಬೇಗ ಬಂದು ನನ್ನ ಕಾಣು.. ಕಾಯುತ್ತಿರುವೆನು ನಾನು..
ಎಂದೆಂದೂ.. ಬದುಕಿರುವವರೆಗೆ....!!!!..

Saturday, 17 March 2012

ನಿದ್ದೆಯವರೆಗೆ...!!


ರವಿಯು ವಿರಮಿಸಲು.. ಹೊರಟನು...
ಶಶಿಯು ವಿಹರಿಸಲು ಹೊರಟನು.. .
ಕವಿಯು ವಿವರಿಸಲು ಹೊರಟನು..
ರವಿಯ.. ಇಳಿ ವಯಸ್ಸು..
ಆಹಾ.. ಅದೆಂಥಾ.. ಸೊಗಸು..
ತೊಟ್ಟಿಹನು.. ಕಿತ್ತಳೆ ಬಣ್ಣದ ದಿರಿಸು..
ಶಶಿಯೇನು.. ಕಮ್ಮಿ..
ತಿಳಿ ಹಾಲಿನ.. ಬಿಳುಪು
ಎಳೆ ಕಂದನ.. ಕಂಗಳ ಹೊಳಪು..
ರವಿಯು ಒರಗಿಯೇ ಬಿಟ್ಟ..
ಭೂ ತಾಯಿಯ ಮಡಿಲಲ್ಲಿ..
ಸಾಗರವ ಹೊದಿಕೆ ಮಾಡಿಬಿಟ್ಟು...
ಶಶಿಯೇರಿ.. ಆಗಸವ.. ತಾರೆಗಳ..
ಒಡನಾಡಿ... ಮೋಡದಾ.. ಉಯ್ಯಾಲೆಯಲಿ
ಹೊಸ ಕನಸ ಬಿತ್ತಿಹನು ಪ್ರೇಮಿಗಳ ಮನದಲ್ಲಿ..
ಹಸೆಗೊರಗಿ ಮಲಗುವಾ.. ಹೊತ್ತಲ್ಲಿ...
ದಣಿದ ಮೈ ಮನಗಳು.. ಕನಸ ಕಾಣುವ ಹೊತ್ತು..
ಹೊತ್ತು ತಂದಂತೆ ಕಡಲಾಳದಿಂದ... .
ಹೊಳೆಯುವ.. ಮುತ್ತು... 

ಅವಳಲೊಂದು ಪ್ರೇಮ ಬಿನ್ನಹ

ವಾರೆ ನೋಟದಿ ನೋಡುವೆ ಯಾತಕೆ
ನೋಟದಿ ನಿಜವೇನು..?

ಮಿರ ಮಿರ ಮಿಂಚುವ ನೋಟವು ನಾಟಿ
ಕಾಡುವ ಪರಿಯೇನು..? ಅಯ್ಯೋ..
ಕಾಡುವ ಪರಿಯೇನು..?

ಕನಸಲೂ ಹೀಗೆ ಆಗಿದೆ ಯಾಕೆ..
ಮಾಟವ ಮಾಡಿದೆಯಾ..?

ಮನಸಲಿ.. ಪೂರಾ ಗೋಜಲು ಯಾಕೆ.
ಕಾಟವ ನೀಡುವೆಯಾ..?

ಇರುಳಲಿ ಚಂದ್ರನು ನಿನ್ನನು ನೆನಪಿಸಿ
ನಿದ್ದೆಯ ಕೆಡಿಸುವನು..

ಹೃದಯವು ಕೂಡ ನಿನ್ನನು ಬಯಸಿ..
ಜಗಳವ ಮಾಡುತಿದೆ..

ಬಣ್ಣ ಬಣ್ಣದ ಕನಸುಗಳೆಲ್ಲ..
ಗೋಪುರ ಕಟ್ಟುತಿದೆ..

ನೀನೆ ನನ್ನ ಬಾಳಿನ ಒಡತಿ..
ಎನ್ನುತ ಹಾಡುತಿದೆ..

ನೀ ಜೊತೆಗಿದ್ದರೆ.. ಜಗವನೆ ಗೆಲ್ಲುವೆ..
ಎನ್ನುವ ನಂಬಿಕೆಯು..

ನೀ ಜೊತೆಗಿದ್ದು ಕೈಯನು ಹಿಡಿದು
ಜೀವನ ನಡೆಸುವೆಯಾ..?
ನನ್ನ ಬಾಳನು ಬೆಳಗುವೆಯಾ..??..

Friday, 16 March 2012

ಏನ ಮಾಡಲಿ...??

ಬೇಕೆಂದಾಗ ಮನದಲ್ಲಿ ಕವನ ಮೂಡೂವುದಿಲ್ಲ..;
ಯಾಕೆಂದರೆ.. ಸ್ಫೂರ್ತಿ ಬೇಕಲ್ಲ..?
ದೊರಕಿದ್ದೆಲ್ಲ.. ಸ್ಫೂರ್ತಿ ಆಗುವುದಿಲ್ಲ..;
ಯಾಕೆಂದರೆ ಮೈ ಮನಗಳು ತಣಿದು ಭಾವನೆಗಳು ಮೂಡಬೇಕಲ್ಲ..??!!
ಮೂಡಿದ ಭಾವನೆಗಳೆಲ್ಲಾ.. ಕವನವಾಗಿ.. ಹರಿಯುವುದಿಲ್ಲ..;
ಯಾಕೆಂದರೆ.. ನಮ್ಮ ಎಲ್ಲಾ ಭಾವನೆಗಳು.. ಉಚಿತವಾಗಿದೆ ಎಂದು..
ಎಲ್ಲರಿಗೂ ಅನಿಸಬೇಕಲ್ಲ...

ನಿನಗೆ...!

ನೀ ನಡುರಾತ್ರಿಯಲ್ಲಿ ನೆನಪಾಗಿ ಬರುವೆ..
ತಡರಾತ್ರಿಯಲ್ಲಿ ಕನಸಾಗಿ.. ಬರುವೆ..
ಮನದಾ.. ಮುಲೆಯಲಿ ನಸು ಕಚಗುಳಿಯಂತೆ ಕೊರೆವೆ.
ಹಾಲು ಸಕ್ಕರೆಯಂತೆ.. ಸಿಹಿಯಾಗಿ.. ಬೆರೆವೆ...
ಎದೆಯ ಆಳದಲ್ಲಿ.. ಒಲವಾಗಿ ಬರುವೆ..

ಇಶ್ಟೆಲ್ಲ ಕೊಡಲು ನೀನು..
ಏನ ಕೊಡಲಿ ನಿನಗೆ ನಾನು..
ನನ್ನನ್ನೇ.. ನಿನಗೆ.. ತೆರುವೆ..
ಮುಡಿಪಾಗಿ. ಇರುವೆ....

ಹಂಬಲ

ಅರಳಿದಾಗ ಅವಳ ಮೊಗದಲ್ಲಿ ನಗೆ ಕಮಲ ;
ಮನದಲ್ಲಿ ಮುಡಿತು ಒಂದು ಹಂಬಲ..!
ಕೇಳಿದೆನು.. ಅವಳ ಬಳಿ; ಮುತ್ತು ಕೊಡಲಾ..
ಒಂದೇ.. ಒಂದು ಸಲ...?
ಅವಳು ಉಲಿದಳು.. ಮೆಲ್ಲನೆ..
ಚಪ್ಪಲಿ ತೆಗೆದು.. ಬಾರಿಸಲಾ..
ಎರಡೇ.. ಎರಡು.. ಸಲ..??

ಮನಸಿನ ಗೊಡವೆ

ಓ ಮನಸೇ. ಹೀಗೇಕೆ ನೀ ಆಡುವೆ.?
ಅವಳು ಕಾಣದಿದ್ದರೆ ಯಾಕೆ ನೀ ಬಾಡುವೆ..?
ಇದ್ದರೆ ಸಾಲದೆ.. ಮುದ್ದಾಗಿ. ಎದೆಯ ಗೂಡಿನ ನಡುವೆ..?
ಮನಸೇ.. ನಿನ್ನ ಒಡಲಿಗೆ.. ಬೇರೆ ಬೇಕೇ..
ಇದಕ್ಕಿಂತ ಚೆನ್ನಾದ.. ಒಡವೆ..??.

ಕನಸು ಕರಗಿದಾಗ....!!

ಮುಂಜಾವಿನ ಹನಿಯಲ್ಲಿ ಕರಗಿತು ಕನಸು..;
ಕನಸು ಕರಗಿತಲ್ಲಾ ಎಂದು ಕ್ಶಣಕಾಲ ಮರುಗಿತು ಮನಸು..,
ಶುರುವಾಯಿತು ನೋಡಿ ಹಕ್ಕಿಗಳ ಚಿಲಿಪಿಲಿ, ಹಾರಟದ ಬಿರುಸು
ಆಗಸದಲ್ಲಿ ರವಿ ಮೇಳೈಸಿದನು ಆಹಾ.. ಎಂಥ ಸೊಗಸು..;
ಬಂತು ಮನದಲ್ಲಿ ಹೊಸ ಹುರುಪು,
ಎಂಥಾ ಕನಸಾದರೂ ಸರಿ ಮಾಡುವೆ.. ನನಸು..!!.