ಬೊಗಸೆ ತುಂಬ ಪ್ರೀತಿ ತುಂಬಿ
ಸೊಗಸುಗಾತಿ ಬಳಿಗೆ ಬರಲು,
ನಗುವ ಮೀಟಿ ನುಡಿಸುತಿರಲು
ಹಗಲು ಮರೆತೆ ಹೋಯಿತು..
ಜ್ವರವು ಏರಿ ಬೆಂದುಹೋಗಿ
ಸ್ವರವು ನಡುಗಿ ಕರಗಿ ಹೋಗಿ,
ಸರಸ ಸನಿಹ ಸಲುಗೆಯಲ್ಲಿ
ವಿರಹ ಕಳೆದು ಸೋತಿತು
ಮಧುವ ಹೀರುವಂತೆ ದುಂಬಿ
ಹದವ ಮಾಡಿಬಿಟ್ತಳೆನ್ನ,
ಎದೆಯ ಕದದ ಚಿಲಕ ಹಾಕಿ
ಹುದುಗಿ ಒಳಗೆ ಕುಳಿತಳು.
ಗದ್ದೆ ಕೆಂಪು ಕೆಸರಿನಲ್ಲಿ
ಬಿದ್ದು ಪ್ರೀತಿ ಹಸಿರ ಬಿತ್ತಿ,
ಸದ್ದು ಇರದೆ ಒಲವು ಬೆಳೆಯೆ
ಗೆದ್ದು ಹೃದಯ ನಲಿಯಿತು...
No comments:
Post a Comment