Popular Posts

Saturday, 12 May 2012

ನೂತನ ಭಾರತ...!!



ಮೂಡೂತಿಹ ರವಿ ದೂರದ ಬೆಟ್ಟದೆಡೆಯಿಂದ
ಮುಗ್ಧ ನಗುವ ಚೆಲ್ಲಿ..
ಏರುತಿಹ ಮಂತ್ರಿ ಮಹೋದಯ ಕುರ್ಚಿಯನು
ತನ್ನ ಕಪಟ ನಗುವ ಚೆಲ್ಲಿ,
ಮುಗ್ಧ ಜನತೆಯ ರಕ್ತ ಚೆಲ್ಲಿ..!!

ಅಂದು ಗಾಂಧೀಜಿ ಬಯಸಿದ್ದರು
ಕಟ್ಟಲು ರಾಮ ರಾಜ್ಯ..
ಇಂದು ಮಂತ್ರಿ ಮಹೋದಯ ಕಟ್ಟುತ್ತಿದ್ದಾನೆ
ನೂತನ ಭಾರತವ..!!
ತುಂಬಿ ಕಪಟ ಭ್ರಷ್ಟ ತ್ಯಾಜ್ಯ..!!
ಎಂಥಹಾ ದೌರ್ಭಾಗ್ಯ...!!!
.

Saturday, 5 May 2012

ಸ್ವಾರ್ಥಿ!!



ಕೋಗಿಲೆಯು ಹಾಡಿತು ಕುಹೂ ಕುಹೂ ಸ್ವರ..
ಅದ ಕೇಳಿ ತಲೆದೂಗಿತು ಮಾವಿನ ಮರ..

ಎರಡೇ ದಿನದಿ ಅಳಿಯಿತು..  ಪ್ರಾಣಿ ಪಕ್ಷಿಗಳ ಈ ಸುಂದರ ಕಾಡು..
ಯಾಕೆಂದರೆ ಕೆಟ್ಟ ಪ್ರಾಣಿ ಮಾನವ ಕಟ್ಟುತ್ತಿದ್ದ ಕಾಂಕ್ರೀಟು ಗೂಡು..

ಬಂತು ದೊಡ್ದ ದೊಡ್ಡ ಕಾರ್ಖಾನೆ...,
ಕೆಲವು ಮರೆಯಾದವು...,
ಕೆಲವು ಸೆರೆಯಾದವು..,
ಕೆಲವುಕೊಲೆಯಾದವು.., ಕರಡಿ, ಕೋತಿ, ಸಿಂಹ ಆನೆ..!!

ಮರಗಳ ಕಡಿದು ಶುರುಮಾಡಿದ ಮಾರಲು..,
ಎಲ್ಲವೂ ತನಗೊಬ್ಬನಿಗೇ.. ಎಂಬಂತೆ ಮೀಸಲು..,

ಎಂಥಹಾ.. ವಿಪರ್ಯಾಸ..?
ಮುಗ್ಧ.. ಪ್ರಾಣಿಗಳ ಜೀವನದೊಂದಿಗೆ.. ಈತನ ಸರಸ..!!!??

ಈಗ ತನ್ನ ಸ್ವಾರ್ಥ ಲಾಲಸೆಗಳಿಗಾಗಿ ಈತನ ಹಾರಾಟ..
ಕ್ಷಮಿಸಿಯಾಳೇ.. ಭೂತಾಯಿ..
ಅನುಭವಿಸುತ್ತಾನೆ.. ಒಂದು ತುತ್ತಿಗೂ ಪರದಾಟ..!!!..

Friday, 4 May 2012

ಹೊಸ ತಂಗಿ



ಅಂದು ಎದುರಲ್ಲಿ ಸಿಕ್ಕಳು ಆ ಹುಡುಗಿ..
ನಾನಂದೆ ನೀ ಸುಂದರ ಬೆಡಗಿ..
ಸುಂದರೀ ನೀ ನನ್ನ..;
ಹೃದಯಕ್ಕೆ ಹಾಕಿದ್ದಿ ಕನ್ನ
ಅವಳಂದಳು,
ಅಣ್ಣ ಎಂದು ಭಾವಿಸಿದ್ದೆ ನಿನ್ನ..!!
ನಾನಂದೆ , ಮೂರ್ಖಿ..;
ನೀ ನನ್ನವಳಾದರೆ ಹೆಚ್ಚು ಸುಖಿ..
ಅವಳು ಮರು ಮಾತಾಡದೆ..;
ಕಟ್ಟಿದಳು ರಾಖಿ,,!!!.

Tuesday, 1 May 2012

ಹೀಗೊಂದು ವೇದನೆ..!!

ಅಂದು ಅವಳಂದಳು.
ಓ ನಲ್ಲ.. ನೀನೇ ನನಗೆಲ್ಲ..;
ಹೃದಯ ತುಂಬಿ ಬಂತು..,
ಗೆಳೆಯನ ಮದುವೆಯಲ್ಲಿ..;
ಷಡ್ರಸ ಭೋಜನವ ಉಂಡಾಗ.. ಆಗುವಂತೆ..!!

ಮಗದೊಮ್ಮೆ ಬಿಗಿದಪ್ಪಿ...
ತುಟಿಗೊಂದು ಮುತ್ತನೊತ್ತಿ ಅಂದಳು..;
ನೀ ನನ್ನ ಮುದ್ದು........,
ಪ್ರೀತಿ ಹರಿದು ಬಂತು.;
ಗೆಳೆಯನ ಅಣ್ಣ ಬಲವಂತದಿಂದ.. ಬಡಿಸಿದ..
ಪಾಯಸದಂತೆ....

ಇಂದು ಕರೆದರೂ ತಿರುಗಿ ನೋಡದೆ..
ಅಂದಳು.. ನೀನಲ್ಲ ನನ್ನ ನಲ್ಲ..
ನಿನ್ನ ಬಳಿ ಏನಿಲ್ಲ.., ನನಗಾಗಿದೆ ನಿಶ್ಚಿತ...
ನಾ ನಿನ್ನವಳಲ್ಲ ಖಚಿತ..
ಕಣ್ಣು ತುಂಬಿ ಬಂತು..,
ಊಟದ ಕೊನೆಯಲ್ಲಿ ಮಜ್ಜಿಗೆಯಲ್ಲಿನ
ಹಸಿಮೆಣಸ ತುಂಡನ್ನು ತಪ್ಪಿ ಜಗಿದಾಗ ಆಗುವಂತೆ..!!!!!!
.