ಏನೂ ಕಾಣದ ಹೊತ್ತು, ನೆತ್ತಿ ಮೇಲಣ ಮುತ್ತು,
ಮನಸಲ್ಲಿ ನಿದಿರೆಯನು ಎಳೆಯುತಿತ್ತು.
ಬಾನು ಭುವಿಗಳ ನಡುವೆ ಚಂದ್ರ, ತಾರೆಯನಿತ್ತು,
ಕನಸಲ್ಲಿ ಕರೆಯೋಲೆ ಬರೆಯುತಿತ್ತು.
ಎಲ್ಲಿ ನೋಡಿದರಲ್ಲಿ ಬರಿಯ ಉಸಿರಿನ ಸದ್ದು,
ಕಲ್ಲುಗಳು ಗೊರಕೆಯನು ಹೊಡೆಯುತಿದ್ದು,
ಬೆಲ್ಲದಾ ಬರಣಿಯದು ಬಾಯ್ದೆರೆದು ಕುಳಿತಿಹುದು,
ಮೆಲ್ಲಲಾ ಇರುವೆಗಳು ಒಕ್ಕಲೆದ್ದು.
ಸುತ್ತಿ ಸುಸ್ತಾಗಿಹ ರವಿಯು ಮತ್ತಡಗಿ ಮಲಗಿನು,
ಮುತ್ತಿನಂತೆಯೆ ಶಶಿಯು ಹೊಳೆಯುತಿಹನು.
ಮುತ್ತಿಟ್ಟ ಮನದನ್ನೆ ಭೂದೇವಿ ನಗುತಿರಲು,
ಕತ್ತೆತ್ತಿ ಶಶಿಯು ತಾ ನಸು ನಕ್ಕನು.....
ಮನಸಲ್ಲಿ ನಿದಿರೆಯನು ಎಳೆಯುತಿತ್ತು.
ಬಾನು ಭುವಿಗಳ ನಡುವೆ ಚಂದ್ರ, ತಾರೆಯನಿತ್ತು,
ಕನಸಲ್ಲಿ ಕರೆಯೋಲೆ ಬರೆಯುತಿತ್ತು.
ಎಲ್ಲಿ ನೋಡಿದರಲ್ಲಿ ಬರಿಯ ಉಸಿರಿನ ಸದ್ದು,
ಕಲ್ಲುಗಳು ಗೊರಕೆಯನು ಹೊಡೆಯುತಿದ್ದು,
ಬೆಲ್ಲದಾ ಬರಣಿಯದು ಬಾಯ್ದೆರೆದು ಕುಳಿತಿಹುದು,
ಮೆಲ್ಲಲಾ ಇರುವೆಗಳು ಒಕ್ಕಲೆದ್ದು.
ಸುತ್ತಿ ಸುಸ್ತಾಗಿಹ ರವಿಯು ಮತ್ತಡಗಿ ಮಲಗಿನು,
ಮುತ್ತಿನಂತೆಯೆ ಶಶಿಯು ಹೊಳೆಯುತಿಹನು.
ಮುತ್ತಿಟ್ಟ ಮನದನ್ನೆ ಭೂದೇವಿ ನಗುತಿರಲು,
ಕತ್ತೆತ್ತಿ ಶಶಿಯು ತಾ ನಸು ನಕ್ಕನು.....
No comments:
Post a Comment