Popular Posts

Saturday, 17 March 2012

ಅವಳಲೊಂದು ಪ್ರೇಮ ಬಿನ್ನಹ

ವಾರೆ ನೋಟದಿ ನೋಡುವೆ ಯಾತಕೆ
ನೋಟದಿ ನಿಜವೇನು..?

ಮಿರ ಮಿರ ಮಿಂಚುವ ನೋಟವು ನಾಟಿ
ಕಾಡುವ ಪರಿಯೇನು..? ಅಯ್ಯೋ..
ಕಾಡುವ ಪರಿಯೇನು..?

ಕನಸಲೂ ಹೀಗೆ ಆಗಿದೆ ಯಾಕೆ..
ಮಾಟವ ಮಾಡಿದೆಯಾ..?

ಮನಸಲಿ.. ಪೂರಾ ಗೋಜಲು ಯಾಕೆ.
ಕಾಟವ ನೀಡುವೆಯಾ..?

ಇರುಳಲಿ ಚಂದ್ರನು ನಿನ್ನನು ನೆನಪಿಸಿ
ನಿದ್ದೆಯ ಕೆಡಿಸುವನು..

ಹೃದಯವು ಕೂಡ ನಿನ್ನನು ಬಯಸಿ..
ಜಗಳವ ಮಾಡುತಿದೆ..

ಬಣ್ಣ ಬಣ್ಣದ ಕನಸುಗಳೆಲ್ಲ..
ಗೋಪುರ ಕಟ್ಟುತಿದೆ..

ನೀನೆ ನನ್ನ ಬಾಳಿನ ಒಡತಿ..
ಎನ್ನುತ ಹಾಡುತಿದೆ..

ನೀ ಜೊತೆಗಿದ್ದರೆ.. ಜಗವನೆ ಗೆಲ್ಲುವೆ..
ಎನ್ನುವ ನಂಬಿಕೆಯು..

ನೀ ಜೊತೆಗಿದ್ದು ಕೈಯನು ಹಿಡಿದು
ಜೀವನ ನಡೆಸುವೆಯಾ..?
ನನ್ನ ಬಾಳನು ಬೆಳಗುವೆಯಾ..??..

2 comments:

  1. ಒಳ್ಳೆ ಕವನ, ಗೇಯತೆ ತುಂಬಾ ಖುಷಿಯಾಗುತ್ತದೆ.

    ReplyDelete
  2. ನೀ ಜೊತೆಗಿದ್ದು ಕೈಯನು ಹಿಡಿದು
    ಜೀವನ ನಡೆಸುವೆಯಾ..?
    ನನ್ನ ಬಾಳನು ಬೆಳಗುವೆಯಾ..??..

    Nice Lines..

    ReplyDelete